Saturday, April 20, 2024
spot_imgspot_img
spot_imgspot_img

ದೈಹಿಕ ಶಿಕ್ಷಕರಿಗೂ ಮುಖ್ಯೋಪಾಧ್ಯಾಯ ಹುದ್ದೆ: ಎಸ್.ಸುರೇಶ್ ಕುಮಾರ್

- Advertisement -G L Acharya panikkar
- Advertisement -

ಬೆಂಗಳೂರು: ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರ ಹುದ್ದೆ ಹಾಗೂ ಮುಖ್ಯೋಪಾಧ್ಯಾಯರ ಹುದ್ದೆಗೆ ಪರಿಗಣಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದ ಪ್ರೌಢಶಾಲೆಗಳಲ್ಲಿ ಒಟ್ಟು 3997 ಮಂದಿ ಗ್ರೇಡ್ 1 ದೈಹಿಕ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ದೈಹಿಕ ಶಿಕ್ಷಕದ ನೇಮಕಾತಿಯ ವೇಳೆಯಲ್ಲಿ ಪ್ರೋ. ಎಲ್.ಆರ್.ವೈದ್ಯನಾಥನ್ ವರದಿಯ 14 ಅಂಶಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ.

ಆದರೆ ದೈಹಿಕ ಶಿಕ್ಷಕರ ಪದನಾಮವನ್ನು ಸಹಶಿಕ್ಷಕರು ( ದೈಹಿಕ ಶಿಕ್ಷಣ) ಎಂದು ಪರಿಗಣಿಸಿ, ಸಹಶಿಕ್ಷಕರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನೂ ದೈಹಿಕ ಶಿಕ್ಷಕರಿಗೆ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದ್ದು, ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಕಳುಹಿಸಿಕೊಡಲಾಗಿದೆ ಎಂದಿದ್ದಾರೆ.

ಶೈಕ್ಷಣಿಕ ವಲಯದಲ್ಲಿ ಮತ್ತೊಂದು ಮಹತ್ವದ ಚಿಂತನೆಯನ್ನು ನಡೆಸಲು ಶಿಕ್ಷಣ ಇಲಾಖೆ ಹೆಚ್ಚೆ ಇಟ್ಟಿದೆ. ಹಲವು ವರ್ಷಗಳಿಂದಲೂ ದೈಹಿಕ ಶಿಕ್ಷಕರು ತಮ್ಮನ್ನು ಸಹಶಿಕ್ಷಕರೆಂದು ಪರಿಗಣಿಸುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸುತ್ತಿದ್ದು, ಶೀಘ್ರದಲ್ಲಿಯೇ ಈ ಕುರಿತ ಆದೇಶ ಹೊರಬೀಳುವ ಸಾಧ್ಯತೆಯಿದೆ.

- Advertisement -

Related news

error: Content is protected !!