- Advertisement -
- Advertisement -

ಕಡಬ: ನಗರಗಳಲ್ಲಿ ಕೇಳಿ ಬರುತ್ತಿದ್ದ ವೀಡಿಯೋ ಟ್ರ್ಯಾಪ್ ಜಾಲ ಇದೀಗ ಹಳ್ಳಿಗೂ ಕಾಲಿಟ್ಟಿದ್ದು, ವೀಡಿಯೋ ಕಾಲ್ ನಲ್ಲಿ ಬಟ್ಟೆ ಬಿಚ್ಚಿದ ಕಡಬದ ಆಟೋ ಚಾಲಕನ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಡಬ ಸಮೀಪದ ಬಿಳಿನೆಲೆಯಲ್ಲಿ ಆಟೋ ಚಾಲಕನಾಗಿರುವ ಯುವಕನಿಗೆ ಯುವತಿಯೋರ್ವಳು ನಗ್ನವಾಗಿ ವೀಡಿಯೋ ಕಾಲ್ ಮಾಡಿದ್ದು, ಈ ಕಡೆಯಿಂದ ಯುವಕನೂ ಬಟ್ಟೆ ಬಿಚ್ಚಿದ್ದಾನೆ. ರಾತ್ರಿ ಹೊತ್ತು ನಡೆದ ಈ ಸಂಭಾಷಣೆಯ ವೀಡಿಯೋ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಯುವಕನ ಮಾನ ಹರಾಜಾಗಿದೆ.




- Advertisement -