Tuesday, July 1, 2025
spot_imgspot_img
spot_imgspot_img

ಬಂಟ್ವಾಳ: ಕುಡಿದ ಮತ್ತಿನಲ್ಲಿ ರಸ್ತೆಯ ಮಧ್ಯೆ ಮಲಗಿದ ವ್ಯಕ್ತಿಯ ಮೇಲೆ ಹರಿದ ದ್ವಿಚಕ್ರ ವಾಹನ; ವ್ಯಕ್ತಿ ದಾರುಣ ಸಾವು!

- Advertisement -
- Advertisement -
driving

ಬಂಟ್ವಾಳ: ರಾತ್ರಿ ವೇಳೆ ರಸ್ತೆಯ ಮಧ್ಯೆ ಮಲಗಿದ ಕೆಲವೇ ಹೊತ್ತಿನಲ್ಲಿ ವ್ಯಕ್ತಿಯೋರ್ವನ ಮೇಲೆ ದ್ವಿಚಕ್ರ ವಾಹನ ಚಲಿಸಿ ಮಲಗಿದ್ದ ವ್ಯಕ್ತಿ ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ಕೋಯನಜಲು ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿ ಸಜೀಪ ಮುನ್ನೂರು ನಿವಾಸಿ ಕೃಷ್ಣಮೂರ್ತಿ ಹೇರಳ (50) ಎನ್ನಲಾಗಿದೆ.

ಅಪಘಾತದ ದೃಶ್ಯ ಸಿಸಿ.ಟಿ.ವಿಯಲ್ಲಿ ಸೆರೆಯಾಗಿದ್ದು, ಮೆಲ್ಕಾರ್ ಸಮೀಪದ ಪೆಟ್ರೋಲ್ ಪಂಪ್ ವೊಂದರ ಸಮೀಪ ವ್ಯಕ್ತಿಯೋರ್ವರು ನಡೆದುಕೊಂಡು ಬಂದು ಅ ಬಳಿಕ ರಸ್ತೆಯಲ್ಲಿ ಮಲಗಿದ್ದಾರೆ. ಆ ವೇಳೆ ದ್ವಿಚಕ್ರ ವಾಹನವು ಮಲಗಿದ್ದ ವ್ಯಕ್ತಿಯ ಮೇಲೆ ಹರಿದು ಹೋಗಿ ಸ್ಕೂಟರ್ ಸವಾರ ಕೂಡ ರಸ್ತೆಗೆ ಎಳೆಯಲ್ಪಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಅಪಘಾತ ನಡೆದ ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೃಷ್ಣಮೂರ್ತಿ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾನೆ. ಸ್ಕೂಟರ್ ಸವಾರನಿಗೆ ಗಾಯವಾಗಿದ್ದು, ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!