Tuesday, September 1, 2026
spot_imgspot_img
spot_imgspot_img

ಮಗಳ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಸೂತಕದ ಛಾಯೆ; ವಿದ್ಯುತ್ ಸ್ಪರ್ಶಿಸಿ ಅಸುನೀಗಿದ ಬಾಲಕಿ!

- Advertisement -
- Advertisement -
driving

ಚಾಮರಾಜನಗರ: ವಿದ್ಯುತ್ ಸ್ಪರ್ಶಿಸಿ, ಹುಟ್ಟುಹಬ್ಬದ ದಿನವೇ ಬಾಲಕಿ ಮೃತಪಟ್ಟ ಅಮಾನವೀಯ ಘಟನೆ ಚಾಮರಾಜನಗರ ತಾಲೂಕಿನ ಕೆಂಗಾಕಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿ ನಿವೇದಿತಾ(3) ಎನ್ನಲಾಗಿದೆ.

ಮೃತ ನಿವೇದಿತಾಳ 3ನೇ‌ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲಿ ಸಿದ್ಧತೆಗಳು ನಡೆಯುತ್ತಿದ್ದವು. ಮನೆಯವರೆಲ್ಲ ಕೇಕ್ ತರಿಸಿ ಪುಟ್ಟ ಮಗಳ ಹುಟ್ಟ ಹಬ್ಬದ ಸಂಭ್ರಮವನ್ನು ಆನಂದಿಸುತ್ತಿದ್ದರು. ಆದರೆ ಇವರ ಸಂತೋಷಕ್ಕೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಕುಟುಂಬಕ್ಕೆ ಆನಂದ ತಂದು ಕೊಟ್ಟಿದ್ದ ಪುಟ್ಟ ಬಾಲಕಿ ನಿವೇದಿತ ಮೃತಪಟ್ಟಿದ್ದಾಳೆ. ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ವಿಧಿಯಾಟಕ್ಕೆ ಕುಟುಂಬಸ್ಥರು ಶಪಿಸುತ್ತಿದ್ದಾರೆ.

ನಿವೇದಿತಾ ಕುಟುಂಬ ತೋಟದ ಮನೆಯಲ್ಲಿ ವಾಸವಾಗಿದೆ. ಆಟ ಆಡುವ ವೇಳೆ ಪಂಪ್‌ಸೆಟ್ ಮುಟ್ಟಿದ ನಿವೇದಿತಾಗೆ ವಿದ್ಯುತ್ ಸ್ಪರ್ಶಿಸಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!