Saturday, April 20, 2024
spot_imgspot_img
spot_imgspot_img

ಶಾಲಾ ಮಕ್ಕಳಿಗೆ ಪ್ರೀತಿ-ವಾತ್ಸಲ್ಯದ ಪಾಠ ಕಲಿಸಿ, ವೀಕ್ಷಕರ ಹೃದಯ ಗೆದ್ದ ಕಾರ್ಕಳದ “ವಂದನಾ” ಟೀಚರ್

- Advertisement -G L Acharya panikkar
- Advertisement -

“ವಂದನ ರೈ” ಯವರು ಕಾರ್ಕಳ ಬಜಗೋಳಿ ನಲ್ಲೂರಿನ ಹಮಣಿಬೆಟ್ಟುವಿನವರು.ಸುಂದರ ಶೆಟ್ಟಿ ಮತ್ತು ವನಜಾಕ್ಷಿ ಶೆಟ್ಟಿ ದಂಪತಿಗಳ ಮಗಳಾಗಿರುವ ಇವರು ಸಣ್ಣ ಪ್ರಾಯದಿಂದಲೇ ನೃತ್ಯ,ನಾಟಕ,ಸಂಗೀತ ಎಲ್ಲ ಸ್ಪರ್ಧೆಗಳಲ್ಲೂ ಪ್ರಶಸ್ತಿಗಳನ್ನು ಪಡೆದ ವಂದನ ಟೀಚರ್ ಈಗ ಎಲ್ಲಾ ಮಕ್ಕಳಿಗೂ ಫೇವರೇಟ್ ಆಗಿದ್ದಾರೆ.
ಕರ್ನಾಟಕದ ಪ್ರತಿಷ್ಠಿತ ಖಾಸಗಿ ಚಾನಲ್ ಗಳಲ್ಲಿ ನಡೆದಂತಹ ಶೋಗಳಲ್ಲಿಆತ್ಯುತ್ತಮ ಸ್ಪರ್ಧಿ ಮತ್ತು ಪ್ರಥಮ ಪ್ರಶಸ್ತಿ ವಿಜೇತರು.

ವಂದನಾ ಅವರು ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕಿ ಮಾತ್ರವಷ್ಟೆ ಅಲ್ಲದೇ,ಆಕೆಯೋರ್ವ ನೃತ್ಯ ನಿರ್ದೇಶಕಿ ,ಉತ್ತಮ ಸಂಘಟಕಿಕೂಡ ಹೌದು. ವಂದನಾ ರೈಯವರ ನೃತ್ಯಗಳಲ್ಲಿ ಜೀವಂತಿಕೆಗೆ ಅವರು ಪ್ರಾಮುಖ್ಯತೆ ನೀಡುತ್ತಾರೆ.ನೃತ್ಯವೆಂದರೆ ಬರೀಯ ಒಂದು ಶಾಸ್ತ್ರಿಯ ವಿಧಾನವಲ್ಲ,ದೇಹದ ಅಂಗಾಂಗಳ ಚಲನೆಯಷ್ಟೆಯಲ್ಲ,ಉತ್ತಮ ನೃತ್ಯವೆಂದರೆ ಅಲ್ಲಿ ಪ್ರತಿಯೊಂದು ಭಂಗಿಯೂ ಜೀವಂತಿಕೆಯನ್ನು ಬೇಡುತ್ತದೆ.


ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಯುವರತ್ನ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಪ್ರಸ್ತುತ ಜೇಸೀಸ್ ಆಂಗ್ಲಮಾಧ್ಯಮ ಶಾಲೆ ಕಾರ್ಕಳದಲ್ಲಿ ಶಿಕ್ಷಕಿಯಾಗಿ ಸಾಂಸ್ಕೃತಿಕ ನಿರ್ದೇಶಕಿಯಾಗಿ, ರಾಷ್ಟ್ರ ಮಟ್ಟದಲ್ಲಿ ಬಾಲ್ ರಂಗ್ ಸ್ಪರ್ಧೆಗೆ ಕರ್ನಾಟಕವನ್ನು ಪ್ರತಿನಿಧಿಸಿ ಅಲ್ಲಿಯೂ ರಿಯಲ್ ಬಾಲ್ ರಂಗ್ ಕಾಂಪಿಟೇಟರ್ ಎನ್ನುವ ಪ್ರಶಸ್ತಿ ಪಡೆದುಕೊಂಡವರು.


ಸದ್ಯಕ್ಕೆ ಸ್ವತಃ ಮಯೂರಿ ನೃತ್ಯ ತರಬೇತಿ ಯನ್ನು ಹುಟ್ಟುಹಾಕಿ ಕಾರ್ಕಳದಲ್ಲಿ ಮತ್ತು ಬಜಗೋಳಿಯಲ್ಲಿ ಹಲವಾರು ಮಕ್ಕಳಿಗೆ ನೃತ್ಯ ತರಬೇತಿಯನ್ನು ನೀಡುತಿದ್ದಾರೆ.

- Advertisement -

Related news

error: Content is protected !!