Monday, September 28, 2026
spot_imgspot_img
spot_imgspot_img

ಇಂದಿನಿಂದ 3 ದಿನಗಳ ಕಾಲ ಪ್ರಧಾನಿ ಮೋದಿ ಅಮೆರಿಕಾ ಪ್ರವಾಸ; ಮೋದಿ ಅಮೇರಿಕಾ ಭೇಟಿಯ ಮಹತ್ವವೇನು?

- Advertisement -
- Advertisement -

ನವದೆಹಲಿ: ಬೈಡೆನ್ ಅಮೆರಿಕ ಅಧ್ಯಕ್ಷರಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಅಮೆರಿಕಾ ಪ್ರವಾಸ ಕೈಗೊಳ್ತಿದ್ದಾರೆ. ಇಂದು ಅಮೆರಿಕಾಕ್ಕೆ ಹೊರಡಲಿರುವ ಮೋದಿ, ಕ್ವಾಡ್‌ ಶೃಂಗ ಸಮ್ಮೇ​ಳನ, ವಿಶ್ವ​ಸಂಸ್ಥೆ 76ನೇ ವಾರ್ಷಿಕ ಸಾಮಾನ್ಯ ಸಭೆ​ಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಜೋ ಬೈಡೆನ್‌ ಜತೆ ದ್ವಿಪಕ್ಷೀಯ ಮಾತು​ಕತೆಯನ್ನೂ ನಡೆಸಲಿದ್ದಾರೆ. ಹೀಗಾಗಿ ಮೋದಿ-ಬೈಡೆನ್ ಭೇಟಿ ಮಹತ್ವ ಪಡೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 3 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಳ್ತಿದ್ದಾರೆ. ಸುದೀರ್ಘ 2 ವರ್ಷಗಳ ಬಳಿಕ ಮೋದಿ ಅಮೆರಿಕಾಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ ಜೋ ಬೈಡೆನ್ ಅಮೆರಿಕ ಅಧ್ಯಕ್ಷರಾದ ಬಳಿಕದ ಮೋದಿ ಮೊದಲ ಭೇಟಿ ಇದಾಗಿದ್ದು, ಬೈಡನ್‌ ಅವರೊಂದಿಗೆ ನೇರ ಮಾತುಕತೆಯಲ್ಲಿ ಭಾಗಿಯಾಗುತ್ತಿರುವುದರಿಂದ ಮೋದಿ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಸಂಭಾವ್ಯ ವೇಳಾಪಟ್ಟಿಯ ಪ್ರಕಾರ ಇಂದಿನಿಂದ ಸೆ.25ರವರೆಗೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಹಲವು ಮಹತ್ವದ ಸಭೆಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ.

ಸೆ. 24ರಂದು ನಡೆಯುವ ಕ್ವಾಡ್‌ ಶೃಂಗಸಭೆಯಲ್ಲಿ ಮೋದಿ ಭಾಗಿಯಾಗಲಿದ್ದು, ವಾಷಿಂಗ್ಟನ್‌ನ ಶ್ವೇತ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್‌ ರಾಷ್ಟ್ರಗಳ ನಾಯಕರು ಉಪಸ್ಥಿತರಿರಲಿದ್ದಾರೆ. ಅಂದೇ ಮೋದಿ- ಬೈಡನ್‌ ಭೇಟಿಯಾಗಲಿದ್ದು ದ್ವಿಪ​ಕ್ಷೀಯ ಮಾತು​ಕತೆ ನಡೆಸಲಿದ್ದಾರೆ. ಇದು ಉಭಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಅಂತಾನೆ ಹೇಳಲಾಗ್ತಿದೆ. ಇನ್ನು ಸೆ. 25ರಂದು ನಡೆಯಲಿರುವ 76ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣವನ್ನೂ ಮಾಡಲಿದ್ದಾರೆ.

ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ ಹಲವು ಉನ್ನತ ಮಟ್ಟದ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆಗಳೊಂದಿಗೂ ಮೋದಿ ಸಭೆ ನಡೆಸಲಿದ್ದಾರೆ.

ಸೆ. 23ರಂದು ಪ್ರಧಾನಿ ಮೋದಿ, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಲಿದ್ದು, ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಭಾರತ-ಅಮೆರಿಕ ಜಾಗತಿಕ ಪಾಲುದಾರಿಕೆ, ಕೊರೊನಾ, ಹವಾಮಾನ ವೈಪರೀತ್ಯದ ಕುರಿತಾಗಿ ಮಹತ್ವದ ಮಾತುಕತೆ ನಡೆಯುವ ಸಾಧ್ಯತೆ ಇದೆ. ಅಮೆರಿಕದ 5 ಪ್ರಮುಖ ಕಂಪನಿಗಳ ಸಿಇಒಗಳ ಜೊತೆ ಮೋದಿ ಸಭೆ ನಡೆಸಲಿದ್ದು, ಆ್ಯಪಲ್‌ನ ಟಿಮ್‌ ಕುಕ್‌ ಸೇರಿ ಇತರೆ 4 ಸಿಇಒಗಳೊಂದಿ ತಂತ್ರಜ್ಞಾನ ವಿಚಾರ ಮಹತ್ವದ ಚರ್ಚೆ ನಡೆಯಲಿದ್ದಾರೆ. ತಾಲಿಬಾನ್, ಚೀನಾ, ಪಾಕ್ ದುಷ್ಟಕೂಟದ ಹಿನ್ನೆಲೆ ಮಹತ್ವದ ಭೇಟಿ ನೀಡಲಾಗುತ್ತಿದೆ. ಭದ್ರತೆ ದೃಷ್ಟಿಯಿಂದ ಮೋದಿ ಭೇಟಿ ಮಹತ್ವ ಪಡೆದುಕೊಂಡಿದೆ.

2019ರ ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಮೋದಿ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರೊಂದಿಗೆ ಹೌಡಿ–ಮೋದಿ ಬೃಹತ್‌ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು. ಅದಾಗ ನಂತರ ಬೈಡೆನ್​​​​​​​ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಅಮೆರಿಕ ಪ್ರವಾಸ ಕೈಗೊಂಡಿರುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ. ಜಾಗತಿಕವಾಗಿಯೂ ಮೋದಿ-ಬೈಡೆನ್ ಭೇಟಿ ಕುತೂಹಲ ಕೆರಳಿಸಿದೆ.

driving
- Advertisement -

Related news

error: Content is protected !!