Tuesday, July 21, 2026
spot_imgspot_img
spot_imgspot_img

ಮಹಾಭಾರತ ಧಾರಾವಾಹಿಯ ಟೈಟಲ್ ಹಾಡನ್ನು ಸುಶ್ರಾವ್ಯವಾಗಿ ಹಾಡಿದ ಮುಸ್ಲಿಂ ವ್ಯಕ್ತಿ; ವೀಡಿಯೋ ವೈರಲ್

- Advertisement -
- Advertisement -

ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದಿ ಧಾರಾವಾಹಿ ‘ಮಹಾಭಾರತ್’ ಟೈಟಲ್ ಹಾಡನ್ನು ಸುಶ್ರಾವ್ಯವಾಗಿ ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಸ್ಲಿಂ ಸಮುದಾಯದವರಾಗಿರುವ ಅವರ ನೆಚ್ಚಿನ ಹಾಡು ಎನ್ನುವ ರೀತಿಯಲ್ಲಿ ಸುಮಧುರವಾಗಿ ಹಾಡಿದ್ದಾರೆ. ಲಯಬದ್ಧವಾಗಿ ಖುಷಿಯಿಂದ ಸಂಭ್ರಮಿಸಿ ಹಾಡುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಹಾಗೆಯೇ ಅವರನ್ನು ಸುತ್ತುವರೆದ ಜನರ ನಡುವೆ ತಮ್ಮ ಕುಟುಂಬಸ್ಥರ ಎದುರು ಧಾರಾವಾಹಿಯ ಟೈಟಲ್ ಸಾಂಗ್ ಹಾಡಿ ರಂಜಿಸಿದ್ದಾರೆ.

ಸಹಜವಾಗಿಯೇ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಟ್ವಿಟ್ಟರ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ದೂರದರ್ಶನದಲ್ಲಿ ಪ್ರಸಾರವಾಗಿ ಜನಪ್ರಿಯಗೊಂಡಿದ್ದ ಮಹಾಭಾರತ್ ಧಾರಾವಾಹಿಯ ಟೈಟಲ್ ಗೀತೆ ಇದಾಗಿದೆ.

- Advertisement -

Related news

error: Content is protected !!