Saturday, August 8, 2026
spot_imgspot_img
spot_imgspot_img

ನದಿಗೆ ಉರುಳಿ ಬಿದ್ದ ಬಸ್; ಆರು ಪ್ರಯಾಣಿಕರು ಸಾವು!

- Advertisement -
- Advertisement -

ಮೇಘಾಲಯ: ಮೇಘಾಲಯದಲ್ಲಿ ಕನಿಷ್ಠ 21 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ನದಿಗೆ ಉರುಳಿ ಬಿದ್ದ ಕಾರಣ ಆರು ಜನರು ಮೃತಪಟ್ಟು, 16 ಜನರನ್ನು ರಕ್ಷಿಸಿರುವ ಘಟನೆ ನಡೆದಿದೆ.

ಮೇಘಾಲಯದ ಶಿಲ್ಲಾಂಗ್ ನ ಸಮೀಪದ ರಿಂಗ್ಡಿ ನದಿಗೆ ಖಾಸಗಿ ಬಸ್ ಒಂದು ಉರುಳಿ ಬಿದ್ದಿದೆ. ಮಧ್ಯರಾತ್ರಿಯ ವೇಳೆ ಬಸ್ ಉರುಳಿ ಬಿದ್ದಿರೋದಾಗಿ ತಿಳಿದುಬಂದ ತಕ್ಷಣ ಪೊಲೀಸರು, ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದಾರೆ. 16 ಜನರನ್ನು ರಕ್ಷಿಸಲಾಗಿದ್ದು, ಬಸ್ ಚಾಲಕ ಸೇರಿದಂತೆ 6 ಜನರು ಈ ದುರ್ಘಟನೆಯಲ್ಲಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಇನ್ನೂ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಗಾಯಗೊಂಡ ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

driving
- Advertisement -

Related news

error: Content is protected !!