Friday, June 26, 2026
spot_imgspot_img
spot_imgspot_img

ಸಿಂಹದ ಪಕ್ಕ ನಿಂತು ಮಾಂಸ ತಿನ್ನಿಸಿದ ಯಶ್; ರಾಕಿ ಭಾಯ್ ಡೇರಿಂಗ್ ಗೆ ಫ್ಯಾನ್ಸ್ ಫಿದಾ

- Advertisement -
- Advertisement -
driving

ಯಶ್ ತಮ್ಮ ಪತ್ನಿಯ ಜೊತೆ ದುಬೈ ಪ್ರವಾಸದಲ್ಲಿದ್ದಾರೆ. ಕೆಜಿಎಫ್ 2 ಬಳಿಕ ಬ್ರೇಕ್ ತೆಗೆದುಕೊಂಡು ಜಾಲಿ ಟ್ರಿಪ್​ಗೆ ಹೊರಟ ಯಶ್​ರನ್ನ ದುಬೈನಲ್ಲಿ ಅದ್ದೂರಿಯಾಗಿ ವೆಲ್ಕಂ ಮಾಡಿಕೊಳ್ಳಲಾಗಿತ್ತು.

ಇದೀಗ ಯಶ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಎಕ್ಸ್​ಕ್ಲೂಸಿವ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಯಶ್ ಬಿಳಿ ಸಿಂಹವೊಂದಕ್ಕೆ ಮಾಂಸ ತಿನ್ನಿಸುವ ಮೂಲಕ ಗಮನಸೆಳೆದಿದ್ದಾರೆ. ಕೋಲೊಂದಕ್ಕೆ ಮಾಂಸ ಸಿಕ್ಕಿಸಿಕೊಂಡು ಅದನ್ನು ಸಿಂಹಕ್ಕೆ ತಿನ್ನಿಸುತ್ತಾ ಸ್ಮೈಲ್ ಮಾಡಿರೋ ಯಶ್ ಅವರ ವಿಡಿಯೋ ಅಭಿಮಾನಿಗಳಲ್ಲಿ ರೋಮಾಂಚನ ಸೃಷ್ಟಿಸಿದೆ.

ಹೇಳಿ ಕೇಳಿ ದುಬೈನಲ್ಲಿ ಚಿರತೆ, ಹುಲಿ, ಸಿಂಹಗಳನ್ನು ಸಾಕುಪ್ರಾಣಿಗಳಂತೆ ಸಾಕಿಕೊಳ್ಳುವುದು ರೂಢಿಯಿದೆ. ದೊಡ್ಡ ದೊಡ್ಡ ಶ್ರೀಮಂತ ಶೇಖ್​​ಗಳು ಹುಲಿ, ಸಿಂಹ, ಚಿರತೆಗಳ ಜೊತೆಗೆ ಹದ್ದುಗಳನ್ನೂ ಸಹ ಸಾಕುವ ಪರಿಪಾಠ ಹೊಂದಿದ್ದಾರೆ.

- Advertisement -

Related news

error: Content is protected !!