- Advertisement -
- Advertisement -

ವಿಟ್ಲ: ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಮನೆಯ ಅಂಗಳಕ್ಕೆ ಬಿದ್ದ ಘಟನೆ ಕನ್ಯಾನ ಸಮೀಪದ ಪಂಜಾಜೆ ಎಂಬಲ್ಲಿ ನಡೆದಿದೆ.

ಮಂಚಿಯಿಂದ ಕನ್ಯಾನ ಕಡೆಗೆ ಕುಡ್ತಮುಗೇರು-ಕುಳಾಲು – ಕನ್ಯಾನ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರು ಕನ್ಯಾನ ಗ್ರಾಮದ ಪಂಜಾಜೆ ಎಂಬಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಾಧಾಕೃಷ್ಣ ಕನ್ಯಾನರವರ ಮನೆಯಂಗಳಕ್ಕೆ ಬಿದ್ದಿದೆ.

ಸುಮಾರು ಹತ್ತು ಅಡಿ ಆಳಕ್ಕೆ ಕಾರು ಬಿದ್ದಿದ್ದು ಕಾರಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಆಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪಕ್ಕದಲ್ಲೇ ಬಾವಿಯಿತ್ತಾದರೂ ಸ್ವಲ್ಪದರಲ್ಲೇ ಭಾರೀ ಅಪಘಾತ ತಪ್ಪಿಹೋಗಿದೆ.



- Advertisement -