
ಬೆಂಗಳೂರು: ಒಂದೂವರೆ ವರ್ಷದ ಬಳಿಕ ಕಿರಿಯ ಪ್ರಾಥಮಿಕ ವಿಭಾಗ ಮತ್ತೆ ಶುರುವಾಗ್ತಿದೆ. ಪುಟ್ಟ ಪುಟ್ಟ ಪುಟಾಣಿ ಮಕ್ಕಳು ಬ್ಯಾಗ್ ಎತ್ಕೊಂಡು, ಅಆಇಈ ಯನ್ನ ಕಲಿಯೋಕೆ ಇನ್ನೊಂದು ವಾರದಲ್ಲೇ ಶಾಲೆಗೆ ಹೊರಡಬೇಕಿದೆ. ಇದಕ್ಕಾಗಿ ವೇದಿಕೆ ಸಜ್ಜಾಗ್ತಿದೆ. ತಜ್ಞರ ಸಮಿತಿಯ ವರದಿಗೆ ಸರ್ಕಾರ ಓಕೆ ಅಂದಿದ್ದು, ಚಿಣ್ಣರ ಕಲಿಕೆಗೆ ಸರ್ಕಾರ ಡೇಟ್ ಫಿಕ್ಸ್ ಮಾಡಿದೆ.

ಹೆಗಲಿಗೆ ಬ್ಯಾಗ್ ಹಾಕೊಂಡು, ಅಪ್ಪ-ಅಮ್ಮನ ಕೈ ಹಿಡಕೊಂಡು ಪುಟ್ ಪುಟಾಣಿ ಮಕ್ಕಳು ಸ್ಕೂಲ್ ನೋಡಿ ಎಷ್ಟು ದಿನ ಆಯ್ತೋ ಏನೋ? ಕೊರೊನಾ ಬಂದಿದ್ದೇ ಬಂದಿದ್ದು ಚಿಕ್ಕ ಮಕ್ಕಳು ಆನ್ಲೈನ್ ಕ್ಲಾಸ್ ಅಂತಾ ಮನೇಲಿದ್ರೆ, ಇನ್ನೂ ಕೆಲ ಮಕ್ಕಳಂತೂ ಓದಿದ್ದನ್ನೇ ಮರೆತು ಹೋಗಿದ್ರು. ಹತ್ ಹತ್ರಾ 2 ವರ್ಷ ಆಗ್ತಾ ಬಂದಿತ್ತು ಪ್ರೈಮರಿ ಶಾಲೆ ಕಂಪ್ಲೀಟ್ ಕ್ಲೋಸ್ ಆಗಿ. ಆದ್ರೀಗ ಮತ್ತೆ 1 ರಿಂದ 5ನೇ ತರಗತಿ ಶಾಲೆಗಳು ಆರಂಭವಾಗೋಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಅಕ್ಟೋಬರ್ 25ರಿಂದ ಶಾಲೆಗಳು ಪುನರಾರಂಭವಾಗಲಿವೆ.
ಶಾಲೆಗಳನ್ನು ರೀ-ಓಪನ್ ಮಾಡುವ ಸಂಬಂಧ ಇಂದು ಸಂಜೆ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನ ಪ್ರಕಟಿಸಿದೆ.

ರಾಜ್ಯ ಸರ್ಕಾರ ಮಾರ್ಗಸೂಚಿ ಅಂಶಗಳು ಇಂತಿದೆ…
- ಅ.25ರಿಂದ 1 ರಿಂದ 5 ನೇ ತರಗತಿಗಳು ಅಕ್ಟೋಬರ್ 25ರಿಂದ ಆರಂಭ
- ಮೊದಲ 5 ದಿನ ಗಳು ಅರ್ಧ ದಿನ ಮಾತ್ರವೇ ತರಗತಿಗಳು
- ಭೌತಿಕ ತರಗತಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಕಡ್ಡಾಯ
- ಕೊರೊನಾ ಲಕ್ಷಣಗಳ ಬಗ್ಗೆ ಶಾಲೆ ಎಂಟ್ರಿ ವೇಳೆ ಸ್ಕ್ರೀನಿಂಗ್
- ಕ್ಲಾಸ್ರೂಮ್ನಲ್ಲಿ ಶೇಕಡಾ 50ರಷ್ಟು ಹಾಜರಾತಿಗೆ ಅವಕಾಶ
- ಶಾಲೆಯಲ್ಲಿ ಸ್ಯಾನಿಟೈಜರ್, ಅಂತರ ಕಾಯ್ದುಕೊಳ್ಳುವಿಕೆ ಕಡ್ಡಾಯ
- ಶಾಲೆಗೆ ಬರುವಾಗ ಮತ್ತು ಹೋಗುವಾಗ ಅಂತರ ಕಡ್ಡಾಯ
- ಕನಿಷ್ಠ 1 ಮೀಟರ್ನಷ್ಟಾದ್ರೂ ಅಂತರ ಕಾಯ್ದುಕೊಳ್ಳಬೇಕು
- ಕ್ಲಾಸ್ರೂಮ್ ಮತ್ತು ಶೌಚಾಲಯ ಪ್ರತಿನಿತ್ಯ ಸ್ವಚ್ಛಗೊಳಿಸಬೇಕು
- ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಎರಡು ಡೋಸ್ ಲಸಿಕೆ ಕಡ್ಡಾಯ
- ಶಿಕ್ಷಣ ಇಲಾಖೆಯ ಗೈಡ್ಲೈನ್ಸ್ ಕಡ್ಡಾಯ ಪಾಲಿಸಬೇಕು
- ಇನ್ನು 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ಶೀಲ್ಡ್ ಬಳಸಬೇಕು ಎಂಬ ಪ್ರಮುಖ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ.
- ಶಾಲೆಗೆ ಮಕ್ಕಳ ಅಟೆಂಡೆನ್ಸ್ ಕಡ್ಡಾಯವಲ್ಲ. ಆದ್ರೆ, ಪೋಷಕರ ಅನುಮತಿ ಬೇಕೆಬೇಕು.

ಇನ್ನು ಚಿಣ್ಣರಿಗೆ ಅಕ್ಷರ ಜ್ಯೋತಿ ಹಚ್ಚಿಸಲು, ತಜ್ಞರ ಸಮಿತಿಯು ಇಂದು ರಾಜ್ಯ ಸರ್ಕಾರಕ್ಕೆ ಹಲವು ಅಂಶಗಳೊಂದಿಗೆ ವಿಸ್ತ್ರತ ವರದಿಯೊಂದನ್ನು ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸಿನ ಆಧಾರದ ಮೇಲೆ ಸರ್ಕಾರ ಧೈರ್ಯವಾಗಿ ನಿರ್ಧಾರ ಕೈಗೊಂಡಿದೆ. ಒಟ್ನಲ್ಲಿ ಮಕ್ಕಳು ಮತ್ತೆ ಸ್ಕೂಲ್ ಬ್ಯಾಗ್ ಹಿಡಿದು ಅಕ್ಷರ ಕಲಿಯಲು ಇನ್ನೇನು ಕೆಲವೇ ದಿನಗಳಷ್ಟೇ ಬಾಕಿಯಿದೆ.










