- Advertisement -
- Advertisement -


ಪುತ್ತೂರು: ಪುರುಷರಕಟ್ಟೆ ಕೈಪಂಗಳದಲ್ಲಿ ಮನೆ ನಿರ್ಮಾಣದ ಕೆಲಸಕ್ಕೆ ಬಂದಿದ್ದ ಪಶ್ಚಿಮಬಂಗಾಳದ ಯುವಕನೊಬ್ವ ನಾಪತ್ತೆಯಾಗಿರುವ ಕುರಿತು ಆತನ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಪಶ್ಚಿಮಬಂಗಾಳದ ಮರ್ಷಿದಬಾದ್ ಜಿಲ್ಲೆಯ ಲಾಲ್‌ಗೋಳ ಶಿತೇಶ್ ನಗರದ ಅಬುತಾಹಿರ್(21ವ) ನಾಪತ್ತೆಯಾದ ಯವಕ.
ಕಳೆದ 20 ದಿನಗಳಿಂದ ಪುರುಷಕಟ್ಟೆ ಕೈಪಂಗಳದಲ್ಲಿ ಹೊಸಮನೆಯೊಂದರಲ್ಲಿ ಗಾರೆಕೆಲಸ ಮಾಡುತ್ತಿದ್ದರು. ಅ.15ರಂದು ಪುರುಷರಕಟ್ಟೆಗೆ ಹೋಗಿ ಬರುವುದಾಗಿ ಹೋದ ಅಬುತಾಹಿರ್ ಅವರು ಬಳಿಕ ಹಿಂದಿರುಗಿಲ್ಲ. ಈ ಕುರಿತು ಆತನ ಸಂಬಂಧಿಕ ಸುಚಂದ್ ಎಸ್.ಕೆ ಅವರು ಪುತ್ತೂರು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



- Advertisement -








