Wednesday, June 24, 2026
spot_imgspot_img
spot_imgspot_img

ಮಂಗಳೂರು: ಕೌಟುಂಬಿಕ ಕಲಹಕ್ಕೆ ಮನನೊಂದ ಯುವಕ ಹೊಳೆಗೆ ಹಾರಿ ಆತ್ಮಹತ್ಯೆ

- Advertisement -
- Advertisement -

ಮಂಗಳೂರು: ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಯುವಕನೊಬ್ಬ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಎಡಪದವು-ಗಂಜಿಮಠದ ಯುವಕ ಸತೀಶ್ ಎಂದು ಗುರುತಿಸಲಾಗಿದೆ.

ಆತ್ಮಹತ್ಯೆಗೂ ಮುನ್ನ ತನ್ನ ಆತ್ಮೀಯರೊಬ್ಬರಿಗೆ ವಾಟ್ಸಾಪ್’ನಲ್ಲಿ ಆಡಿಯೋ ಸಂದೇಶ ಕಳುಹಿಸಿದ್ದಾರೆ. “ನಾನು ಗುರುಪುರದ ಸೇತುವೆಯಿಂದ ಹೊಳೆಗೆ ಹಾರಿ ಸಾಯುತ್ತಿದ್ದೇನೆ. ಮನೆಯಲ್ಲಿ ಪತ್ನಿಯಿಂದ ಕಿರಿಕಿರಿ ಆಗುತ್ತಿದೆ. ಪತ್ನಿಯ ಕಿರಿಕಿರಿಯಿಂದ ಜೀವನವೇ ಬೇಡವಾಗಿದೆ. ನನ್ನ ಸ್ಕೂಟಿ ಮೊಬೈಲ್ ಸೇತುವೆಯ ಮೇಲಿದ್ದು, ನನ್ನನ್ನು ಕ್ಷಮಿಸಿ” ಎಂದು ತನ್ನ ಆತ್ಮೀಯರೊಬ್ಬರಿಗೆ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ಸತೀಶ್ ಅವರು ಗಂಜಿಮಠ ಸಮೀಪ ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದು, ಅವರ ಮೃತದೇಹ ಮರವೂರು ಸೇತುವೆಯ ಹೊಳೆಯಲ್ಲಿ ಪತ್ತೆಯಾಗಿದೆ.

- Advertisement -

Related news

error: Content is protected !!