

ಬದಿಯಡ್ಕ: ಬಾಡೂರು ಬಳಿಯ ಪ್ರವೀಣ್ (32) ಎಂಬ ಯುವಕ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ನಿನ್ನೆ ರಾತ್ರಿ ಊಟ ಮಾಡಿ ಮನೆಯಲ್ಲಿ ಕುಳಿತಿದ್ದಾಗ ಒಂದು ಕಾರು ಬಂದಿದ್ದು, ಈತ ಕಾರಿನಲ್ಲಿ ಹತ್ತಿ ನಾಪತ್ತೆಯಾಗಿದ್ದಾನೆಂದು ತಿಳಿದುಬಂದಿದೆ.

ನಾಪತ್ತೆಯಾದ ಪ್ರವೀಣ್ ಬದಿಯಡ್ಕ ಬಳಿಯ ಒಂದು ಪೆಟ್ರೋಲ್ ಬಂಕ್ನ ಮೆನೇಜರ್ ಆಗಿದ್ದಾನೆ ಎಂದು ತಿಳಿದುಬಂದಿದೆ. ಕಳೆದ ಕೆಲವು ತಿಂಗಳಿಂದ ಈತನ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಆರಾಧನಾ ರೀತಿಯಲ್ಲಿ ಬದಲಾವಣೆ ಕಂಡುಬಂದ ಹಿನ್ನೆಲೆಯಲ್ಲಿ ಈತನನ್ನು ತಿರುವನಂತಪುರದ ಸಂಸ್ಥೆಯೊಂದಕ್ಕೆ ಸೇರಿಸಲಾಗಿತ್ತು. ಆದರೆ ಅಲ್ಲಿಂದ ಆತ ಪರಾರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆಂದು ತಿಳಿದುಬಂದಿದೆ. ಪೊಲೀಸರು ಈತನನ್ನು ಊರಿಗೆ ಕಳುಹಿಸಿದ್ದಾರೆ.

ಮತ್ತೆ ಈತ ಮನೆಯಿಂದ ನಾಪತ್ತೆಯಾಗಿದ್ದು ಮತಾಂತರಗೊಂಡಿರಬಹುದೆಂದು ತಿಳಿದುಬಂದಿದೆ. ಬೆರ್ಕೆ ಎಂಬ ಪೆಟ್ರೋಲ್ ಪಂಪ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತನನ್ನು ಸಂಸ್ಥೆಯ ಅನ್ಯ ಮತೀಯರು ಮತಾಂತರ ಮಾಡಿರಬಹುದೆಂಬ ಶಂಕೆ ಮೂಡಿದೆ.ಈ ಬಗ್ಗೆ ಸ್ಪೆಷಲ್ ಬ್ರಾಂಚ್ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
ಘಟನೆಯ ವಿವರ; ತಾಯಿಯಿಂದ ದೂರು
ಶುಕ್ರವಾರದಿಂದ ಮನೆಯಿಂದ ರಾತ್ರೋ ರಾತ್ರಿ ಮನೆಯವರನ್ನು ಬೆದರಿಸಿ ತಂಡ ಕೊಂಡೊಯ್ದ ಪ್ರವೀಣ್ ಪೂಜಾರಿಯನ್ನು ಇದುವರೆಗೂ ಪತ್ತೆಹಚ್ಚಲಾಗಿಲ್ಲ. ಬಿಳಿ ಕಾರಿನಲ್ಲಿ ಬಂದ ನಾಲ್ವರ ತಂಡ ಅಪಹರಿಸಿರಿದ್ದು ಇದರಲ್ಲಿ ಒಬ್ಬಾತ ಹಳದಿ ಟೀಶರ್ಟ್ ಧರಿಸಿದ್ದು ಮಲೆಯಾಳಂ ಭಾಷೆ ಮಾತನಾಡಿ ಬೆದರಿಸಿದ್ದ ಎಂದು ಯುವಕನ ತಾಯಿ 60 ವರುಷದ ಪ್ರೇಮ ಪೂಜಾರಿ ಇದೀಗ ಮಗನ ನಾಪತ್ತೆಯಿಂದ ದುಃಖಿತರಾಗಿ ಬದಿಯಡ್ಕ ಠಾಣೆಗೆ ದೂರು ನೀಡಿದ್ದಾರೆ.










