

ಬೈಕಂಪಾಡಿಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕ ತಾನು ಹಿಂದೂ ಯುವಕ ಎಂದು ನಂಬಿಸಿ ಮಂಗಳೂರಿನ ಯುವತಿಯೋರ್ವಳಿಗೆ ಲವ್ ಜಿಹಾದ್ ಹೆಸರಿನಲ್ಲಿ ಮೋಸ ಮಾಡಿ, ಇಸ್ಲಾಂಗೆ ಮತಾಂತರವಾಗುವಂತೆ ಪೀಡಿಸಿ ಇದೀಗ ಇಬ್ಬರ ಜೊತೆಗಿನ ಫೋಟೋಗಳನ್ನು ತೋರಿಸಿ ಮತಾಂತರವಾಗದಿದ್ದಲ್ಲಿ ಅತ್ಯಾಚಾರವೆಸಗುವುದಾಗಿ ಬೆದರಿಕೆಯೊಡ್ದಿದ್ದು,
ಯುವತಿಯ ಜೊತೆ ಅಸಭ್ಯ ರೀತಿಯಲ್ಲಿ ವರ್ತಿಸಿ ಕಿರುಕುಳ ನೀಡುತ್ತಿದ್ದ ಘಟನೆ ನಡೆದಿದ್ದು ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಇಬ್ರಾಹಿಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣ ರಾಮ್ ಸೇನಾ ಕಾರ್ಯಕರ್ತರ ಗಮನಕ್ಕೆ ಬಂದಿದ್ದು ಈ ನಿಮಿತ್ತ ಹಿಂದೂ ಯುವತಿಗೆ ನ್ಯಾಯ ಕೊಡಿಸುವ ಸಲುವಾಗಿ ರಾಮ್ ಸೇನಾ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸ್ಥಳೀಯರು ಸೇರಿ ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಇಬ್ರಾಹಿಮ್ ಎಂಬ ಮುಸ್ಲಿಂ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಮ್ ಸೇನಾ ದ. ಕ. ಜಿಲ್ಲಾಧ್ಯಕ್ಷರಾದ ಕಿರಣ್ ಅಮೀನ್ ಊರ್ವಸ್ಟೋರ್ ಜಿಲ್ಲೆಯಲ್ಲಿ ಇಂತಹ ಕೃತ್ಯಗಳು ಹೆಚ್ಚಾಗಿ ಕಂಡುಬರುತ್ತಿದ್ದು ಪೊಲೀಸ್ ಇಲಾಖೆಯು ಇದರ ವಿರುದ್ಧ ಗಮನಹರಿಸಬೇಕು. ಹಾಗೂ ಅನ್ಯಕೋಮಿನ ಯುವಕರೇ ಪದೇ ಪದೇ ಹಿಂದೂ ಸಮಾಜವನ್ನು ಕೆಣಕುವ ದುಸ್ಸಾಹಾಸ ಮಾಡದಿರಿ ಮುಂದೆ ಬರುವ ಎಲ್ಲಾ ಸಮಸ್ಯೆಗಳನ್ನು ನೀವೇ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ರಾಮ್ ಸೇನಾ ದ. ಕ. ಜಿಲ್ಲಾ ಮುಖಂಡರುಗಳು, ಮೂಲ್ಕಿ ತಾಲ್ಲೂಕು ಮುಖಂಡರುಗಳು, ಹಾಗೂ ರಾಮ್ ಸೇನಾ ಕಾರ್ಯಕರ್ತರು ಕಾನೂನು ಪ್ರಕ್ರಿಯೆ ಮುಗಿಯುವವರೆಗೂ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಉಪಸ್ಥಿತರಿದ್ದರು.










