Thursday, July 30, 2026
spot_imgspot_img
spot_imgspot_img

ಸ್ನಾನದ ಬಳಿಕ ಟವಲ್​ ಕೊಡಲು ತಡವಾಗಿದ್ದಕ್ಕೆ ಪತ್ನಿಯನ್ನೆ ಹತ್ಯೆಗೈದ ಪತಿ!

- Advertisement -
- Advertisement -

ಸ್ನಾನ ಮಾಡಿದ ಬಳಿಕ ಪತ್ನಿ ಟವಲ್​ ಕೊಡಲು ವಿಳಂಬ ಮಾಡಿದ್ದಕ್ಕೆ ಕೋಪಗೊಂಡ ಪತಿಯು ಪತ್ನಿಯನ್ನು ಕೊಲೆ ಮಾಡಿದ ಆಘಾತಕಾರಿ ಘಟನೆಯು ಮಧ್ಯಪ್ರದೇಶದ ಬಾಲಾಘಾಟ್​ ಜಿಲ್ಲೆಯಲ್ಲಿ ಸಂಭವಿಸಿದೆ.

ಆರೋಪಿಯನ್ನು ರಾಜ್​ಕುಮಾರ್​ ಬಾಗೆ(50) ಎಂದು ಗುರುತಿಸಲಾಗಿದೆ. ದಿನಗೂಲಿ ಕಾರ್ಮಿಕನಾಗಿದ್ದ ಈತ ಪತ್ನಿ ಪುಷ್ಪಾ ಬಾಯಿ(45)ಬಳಿ ಸ್ನಾನವಾದ ಬಳಿಕ ಟವೆಲ್​ ನೀಡುವಂತೆ ಕೇಳಿದ್ದಾನೆ. ಈ ವೇಳೆ ಪಾತ್ರೆ ತೊಳೆಯುತ್ತಿದ್ದ ಪುಷ್ಪಾ ಬಾಯಿ ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದಾರೆ.

ಇಷ್ಟಕ್ಕೆ ಕೋಪಗೊಂಡ ಪತಿಯು ಪತ್ನಿಯ ತಲೆಗೆ ಸಲಾಕೆಯಿಂದ ಪದೆ ಪದೆ ಬಾರಿಸಿದ್ದಾನೆ. ಗಾಯಗೊಂಡ ಪುಷ್ಪಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತಾಯಿಯನ್ನು ಪ್ರಾಣಾಪಾಯದಿಂದ ಬಚಾವ್​ ಮಾಡಲು ಬಂದ 23 ವರ್ಷದ ಮಗಳಿಗೂ ರಾಜ್​ಕುಮಾರ್​ ಆವಾಜ್​ ಹಾಕಿದ್ದ ಎನ್ನಲಾಗಿದೆ.

ಮರಣೋತ್ತರ ಪರೀಕ್ಷೆ ಬಳಿಕ ಪುಷ್ಪಾ ಮೃತದೇಹವನ್ನು ಕುಟುಂಬಸ್ಥರಿಗೆ ರವಾನಿಸಲಾಗಿದೆ. ಪುಷ್ಪಾ ಕುಟುಂಬಸ್ಥರು ಆರೋಪಿ ವಿರುದ್ಧ ದೂರು ದಾಖಲಿಸಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕಿರ್ನಾಪುರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

- Advertisement -

Related news

error: Content is protected !!