- Advertisement -
- Advertisement -
ಪ್ರೀತಿ, ಕಾಮ ಕುರುಡು ಅಂತಾರೆ. ಪ್ರೇಮಿಗಳು ಕಾಮದ ನಶೆಯಲ್ಲಿ ಜಗವನ್ನೇ ಮರೆಯುತ್ತಾರೆ. ಯಾವುದಕ್ಕೂ ಹೆದರದ ಜೋಡಿಯೊಂದು ಹಾಡಹಗಲೇ ಚುಂಬಿಸಿ, ಆಲಂಗಿಸುವ ದೃಶ್ಯ ಈಗ ನೆಟ್ಟಿಗರ ಬಾಯಿಗೆ ಆಹಾರವಾಗಿದೆ.
ಮಂಗಳೂರಿನ ಹೆಸರಾಂತ ಶಾಪಿಂಗ್ ಮಾಲ್ ಒಂದರ ಮಹಡಿಯ ಬಾಲ್ಕನಿಯಲ್ಲಿ ಹಾಡಹಗಲೇ ಯುವಕ ಮತ್ತು ಯುವತಿ ತಮ್ಮ ಪ್ರೇಮದ ನಶೆಯಲ್ಲಿ ಮುಳುಗಿ ಹೋಗಿ ಪರಸ್ಪರ ಚುಂಬಿಸಲು ಪರದಾಡುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಯುವತಿಯು ಬುರ್ಖಾ ಧರಿಸಿದ್ದು ಯುವಕ ಆಕೆಯ ದೇಹಗಳನ್ನು ಸ್ಪರ್ಶಿಸಿ ಮುತ್ತಿಕ್ಕಲು ಪ್ರಯತ್ನಿಸುವ ರಾಸಲೀಲೆಯ ದೃಶ್ಯವನ್ನು ಯಾರೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಇವರಿಬ್ಬರ ರಸಗಳಿಗೆಯ ಚಿತ್ರಗಳು, ಪರಸ್ಪರ ಚುಂಬಿಸಲು ಪರದಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳು ಕುತೂಹಲದಿಂದ ಶೇರ್ ಮಾಡುತ್ತಿವೆ. ಯುವಕ-ಯುವತಿ ಎಲ್ಲಿಯವರು, ಇದು ಯಾವಾಗ ಸಂಭವಿಸಿದೆ ಎಂಬ ಬಗ್ಗೆಯೂ ಸದ್ಯಕ್ಕೆ ಮಾಹಿತಿ ಲಭ್ಯವಿಲ್ಲ.
- Advertisement -