- Advertisement -
- Advertisement -



ಮಂಗಳೂರು: ಭಾರತ ಸರಕಾರದಿಂದ ಅಮಾನ್ಯಗೊಂಡಿರುವ 1000ರೂ. ಹಾಗೂ 500ರೂ. ಮುಖಬೆಲೆಯ 1.92 ಕೋಟಿ ರೂ. ಮೌಲ್ಯದ ನೋಟುಗಳನ್ನು ಮಂಗಳೂರು ಪೊಲೀಸರು ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಮಂಗಳೂರು ನಗರದ ಲಾಲ್ ಬಾಗ್ ಬಳಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಕಣ್ಣೂರು ಬೋರುಗುಡ್ಡೆ ನಿವಾಸಿ ಝುಬೈರ್ ಹಮ್ಮಬ್ಬ, ಪಡೀಲ್ ವೀರನಗರ ನಿವಾಸಿ ದೀಪಕ್ ಕುಮಾರ್, ಹಾಗೂ ಬಜ್ಪೆ ನಿವಾಸಿ ಅಬ್ದುಲ್ ನಾಸಿರ್ ಎಂದು ತಿಳಿದುಬಂದಿದೆ.


ಮಂಗಳೂರಿನ ಲಾಲ್ಬಾಗ್ ಬಳಿ ಬರ್ಕೆ ಪೊಲೀಸರು ಇನೋವಾ ಕಾರು ತಪಾಸಣೆ ನಡೆಸಿದ್ದು, ಈ ವೇಳೆ ಹಳೆ ನೋಟು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹಣ, ಕಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ .

ಬಂಧಿತರಿಂದ ಅಮಾನ್ಯಗೊಂಡಿರುವ ಒಂದು ಸಾವಿರ ಮುಖಬೆಲೆಯ 50 ಲಕ್ಷ ರೂ. ಹಾಗೂ 500 ಮುಖ ಬೆಲೆಯ 1 ಕೋಟಿ ಐವತ್ತು ಲಕ್ಷದ ಐವತ್ತು ಸಾವಿರ ರೂ. ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.




- Advertisement -








