Sunday, August 2, 2026
spot_imgspot_img
spot_imgspot_img

ಕಾಪು: ರೈಲು ಡಿಕ್ಕಿ ಹೊಡೆದು ವ್ಯಕ್ತಿ ದಾರುಣ ಸಾವು

- Advertisement -
- Advertisement -

ಕಾಪು: ರೈಲು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕಾಪುವಿನ ಮಲ್ಲಾರು ಗ್ರಾಮದ ಕುಡ್ತಿಮಾರು ಬಳಿಯ ರೈಲ್ವೇ ಟ್ರ‍್ಯಾಕ್ ನಲ್ಲಿ ನಡೆದಿದೆ. ಮೃತರನ್ನು ಮಲ್ಲಾರು ಪಕೀರಣಕಟ್ಟೆ ಎಂ. ಜೆ.ಎಂ ಮಸೀದಿ ಬಳಿಅಯ ನಿವಾಸಿ ಅಬ್ದುಲ್ ರಜಾಕ್ (48) ಎಂದು ಗುರುತಿಸಲಾಗಿದೆ.

ಇಂದು ಬೆಳಿಗ್ಗೆ ಅಬ್ದುಲ್ ರಜಾಕ್ ಅವರು ಮಲ್ಲಾರು ಗ್ರಾಮದ ಕುಡ್ತಿಮಾರು ಬಳಿಯ ರೈಲ್ವೇ ಟ್ರ‍್ಯಾಕ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ 06:30 ಗಂಟೆಯಿ0ದ 08:00 ಗಂಟೆಯ ನಡುವೆ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ಯಾವುದೋ ರೈಲು ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಹೇಳಲಾಗಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಆಪತ್ಬಾಂಧವ ಸೂರಿ ಶೆಟ್ಟಿ ಅವರ ಸಹಕಾರದೊಂದಿಗೆ ಮೃತ ದೇಹವನ್ನು ತೆರವುಗೊಳಿಸಲಾಯಿತು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!