- Advertisement -
- Advertisement -


ಅಮಾಸೆಬೈಲು: ಕಾಡಿನಲ್ಲಿ ನವಜಾತ ಶಿಶುವೊಂದನ್ನು ಪೋಷಕರು ಬಿಟ್ಟು ಹೋದ ಅಮಾನುಷ ಘಟನೆ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಾಲಿನ ಡೈರಿಗೆ ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಇಲ್ಲಿನ ಮಚ್ಚಟ್ಟು ಗ್ರಾಮದ ಸಣ್ಣ ಸೇತುವೆ ಬಳಿ ರಸ್ತೆಯ ಬದಿಯ ಕಾಡಿನ ಪೊದೆಯಲ್ಲಿ ಮಗು ಅಳುವ ದ್ವನಿ ಕೇಳಿಬಂದಿದೆ. ಅವರು ಅಲ್ಲಿ ಹೋದಾಗ ಸುಮಾರು 7 ದಿನಗಳ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



- Advertisement -








