


ಅಪ್ಪ- ಅಮ್ಮ ಬೈದರೆಂದು ಎಂಬ ಕಾರಣಕ್ಕೆ ಇಲ್ಲೊಬ್ಬ ಬಾಲಕ ಮನನೊಂದು ದುಸ್ಸಾಹಸಕ್ಕೆ ಇಳಿದಿದ್ದಾನೆ. ಮಧ್ಯಪ್ರದೇಶದ ಗ್ವಾಲಿಯರ್ ಈ ವಿಚಿತ್ರಕ್ಕೆ ಪ್ರಕರಣಕ್ಕೆ ಸಾಕ್ಷಿಯಾಗಿದೆ. 17 ವರ್ಷದ ಬಾಲಕ ತಂದೆ ಬೈದರು ಎಂಬ ಕಾರಣಕ್ಕೆ ಕಬ್ಬಿಣದ ಮೊಳೆಗಳನ್ನು ನುಂಗಿದ್ದಾನೆ.
ಈತನ ತಂದೆ ಯಾವುದೋ ಕಾರಣಕ್ಕೆ ಬೈದಿದ್ದಾರೆ. ಆಗ ಧನಂಜಯ ಮನೆಯಲ್ಲಿದ್ದ 21 ಕಬ್ಬಿಣದ ಮೊಳೆಗಳನ್ನು ನುಂಗಿದ್ದಾನೆ. ಆದರೆ ಈ ವಿಷಯ ಮನೆಯವರಿಗೆ ಗೊತ್ತೇ ಇರಲಿಲ್ಲ. ಇದ್ದಕ್ಕಿದ್ದಂತೆಯೇ ಈತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪಾಲಕರಿಗೂ ಇದು ಏನು ಎಂದು ತಿಳಿಯಲಿಲ್ಲ, ಬಾಲಕನೂ ಬಾಯಿ ಬಿಡಲಿಲ್ಲ. ಹೊಟ್ಟೆ ನೋವು ಜಾಸ್ತಿಯಾದಾಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಸಿಕ್ಕಾಪಟ್ಟೆ ಮೊಳೆಗಳು ಕಾಣಿಸಿಕೊಂಡಿವೆ. ವೈದ್ಯರು ಕೂಡ ಇದು ಏನೆಂದು ತಿಳಿಯದೇ ಒಮ್ಮೆಲೇ ದಂಗಾಗಿದ್ದಾರೆ.


ಇಷ್ಟೊಂದು ಮೊಳೆಗಳು ಹೊಟ್ಟೆಯಲ್ಲಿ ಹೋಗಲು ಹೇಗೆ ಸಾಧ್ಯ ವೈದ್ಯರು ಸಹ ಬೆರಗಾಗಿದ್ದಾರೆ. ಬಳಿಕ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಡೆಸಿದಾಗ ಹೊಟ್ಟೆಯಲ್ಲಿ ನಿಜವಾಗಿಯೂ ಇರುವುದು ಮೊಳೆಗಳೇ ಎಂದು ತಿಳಿದಿದೆ. ಅಚ್ಚರಿಯಿಂದ ವೈದ್ಯರು ವಿಷಯ ಹೇಳಿದಾಗ ಬಾಲಕ ಬಾಯಿಬಿಟ್ಟಿದ್ದಾನೆ. ಎರಡೂವರೆ ಗಂಟೆಗಳ ಸತತ ಶಸ್ತ್ರಚಿಕಿತ್ಸೆ ನಡೆಸಿ ಮೊಳೆಗಳನ್ನು ಕೊನೆಗೂ ಹೊರತೆಗೆಯಲಾಗಿದೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.










