


ವಿಟ್ಲ: ಇದೇ 27 ರಂದು ನಡೆಯಲಿರುವ ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ 18 ವಾರ್ಡ್ ಗಳ ಪೈಕಿ 17 ವಾರ್ಡ್ ಗಳಿಗೆ ಆಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗಿದೆ.

ನಿನ್ನೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗಿದ್ದು, ಇಂದು ಕಾಂಗ್ರೆಸ್ ಬಿಡುಗಡೆಗೊಳಿಸಿದೆ. ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಬಿಡುಗಡೆಗೊಳಿಸಿದ್ದಾರೆ. ಪ್ರಬಲ ಪೈಪೋಟಿ ಇರುವ 11 ವಾರ್ಡ್ ಗೆ ಇನ್ನೂ ಅಭ್ಯರ್ಥಿ ಬಗ್ಗೆ ಘೋಷಣೆ ಮಾಡಿಲ್ಲ. ನಾಳೆಯೊಳಗಡೆ ಬಿಡುಗಡೆ ಮಾಡುತ್ತೇವೆ ಎಂದು ಶಕುಂತಳಾ ಶೆಟ್ಟಿ ತಿಳಿಸಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಕೋಶಾಧಿಕಾರಿ ಶಶಿಧರ ಹೆಗ್ಡೆ, ಜಿಲ್ಲಾ ವೀಕ್ಷಕ ಮಹಮ್ಮದ್ ಕುಂಜತ್ತಬೈಲು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಂ ಕೆ.ವಿ, ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ಎಂ.ಎಸ್ ಮಹಮ್ಮದ್,ಚಂದ್ರಹಾಸ ಕರ್ಕೆರ, ಭಾಗವಹಿಸಿದ್ದರು.

11 ನೇ ವಾರ್ಡ್’ನಿಂದ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು..? ಅರುಣ್ ವಿಟ್ಲ ವಿರುದ್ಧ ಯಾರನ್ನು ಫೀಲ್ಡ್’ಗಿಳಿಸುತ್ತೆ ಕೈ ಪಡೆ
ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಗೆ ಗರಿಗೆದರಿದ್ದು ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ತಾನು ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಬಿಜೆಪಿ ಎಲ್ಲಾ ವಾರ್ಡ್ ಗಳಿಂದ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದ್ರೆ 11 ನೇ ವಾರ್ಡ್ನಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿ ಎಂದು ಈ ವರೆಗೂ ಮಾಹಿತಿ ನೀಡಿಲ್ಲ.
11 ನೇ ವಾರ್ಡ್ ಪ್ರತಿಷ್ಟಿತ ಕಣವಾಗಿದ್ದು ಈ ವಾರ್ಡ್ ನಿಂದ ಬಿಜೆಪಿ ತನ್ನ ಅಭ್ಯರ್ಥಿ ಅರುಣ್ ವಿಟ್ಲ ಅವರನ್ನು ಫೀಲ್ಡ್’ಗೆ ಇಳಿಸಿದೆ. ಆದ್ರೆ ಕಾಂಗ್ರೆಸ್ ಮಾತ್ರ ಈ ವರೆಗೂ ಯಾರು ತನ್ನ ಅಭ್ಯರ್ಥಿ ಎಂಬುವುದರ ಸುಳಿವು ಬಿಟ್ಟುಕೊಟ್ಟಿಲ್ಲ. ಇದರಿಂದಾಗಿ ಬಿಜೆಪಿ ಪಾಳಯದಲ್ಲಿ ತಲ್ಲಣ ಶುರುವಾಗಿದೆ.

