Monday, September 28, 2026
spot_imgspot_img
spot_imgspot_img

ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಲಾಲ್ ಭಾಗ್ ನಲ್ಲಿ 80ಕ್ಕೂ ಅಧಿಕ ಅನಧಿಕೃತ ಮತದಾರರ ಚೀಟಿ ಪತ್ತೆ..!

- Advertisement -
- Advertisement -
vtv vitla
vtv vitla

ಕೋಟೆಕಾರ್ ಪಟ್ಟಣ ಪಂಚಾಯತ್ 12ನೇ ವಾರ್ಡ್ ಜಲಾಲ್ ಭಾಗ್ ನಲ್ಲಿ ಸುಮಾರು 80 ಕ್ಕೂ ಅಧಿಕ ಅನಧಿಕೃತ ಮತದಾರರ ಪಟ್ಟಿಯಲ್ಲಿ ಹೆಸರು ನಮೂದಿಯಾಗಿದೆ. ಒಂದೇ ಡೋರ್ ನಂಬರಿನಲ್ಲಿ ವಿವಿಧ ಧರ್ಮದ ನಲವತ್ತಕ್ಕೂ ಹೆಚ್ಚು ಮತದಾರರ ಹೆಸರು ನಮೂದಿಯಾಗಿದ್ದು, ರಾಜಕೀಯ ನಾಯಕನ ಕೈಯಲ್ಲಿ 40ಕ್ಕೂ ಹೆಚ್ಚು ಮತದಾರರ ಚೀಟಿ ಕಂಡುಬಂದಿದ್ದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಮಾಜಿ ಸದಸ್ಯರೊಬ್ಬರು ಸುಲಭವಾಗಿ ಗೆಲ್ಲಲು ಮಾಡಿದ ಷಡ್ಯಂತ್ರವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಗೀಡಾಗಿದೆ. ಅನಧಿಕೃತ ಹೆಸರುಗಳ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

vtv vitla
vtv vitla

ಅದಲ್ಲದೆ ಇಲ್ಲಿನ ಪ್ರತಿಷ್ಟಿತ ವೈದ್ಯಕೀಯ ಕಾಲೇಜಿನಲ್ಲಿರುವ ಹೊರ ರಾಜ್ಯದ ವಿದ್ಯಾರ್ಥಿಗಳ ಹೆಸರನ್ನು ತನ್ನ ರಾಜಕೀಯ ಲಾಭಕ್ಕಾಗಿ ನಮೂದಿಸಿದ್ದು ಇದರ ಹಿಂದಿನ ರೂವಾರಿ ಯಾರು ಎನ್ನುವುದು ಬಹಿರಂಗಪಡಿಸಲಾಗದು ಎಂದು ಸ್ಥಳೀಯ ರಾಜಕೀಯ ನಾಯಕರೊಬ್ಬರು ಬಹಿರಂಗಪಡಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆಯ ದಿವಸ ಗೊಂದಲ ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಯೂ ಕಂಡುಬರುತ್ತದೆ.

vtv vitla
vtv vitla
suvarna gold
- Advertisement -

Related news

error: Content is protected !!