- Advertisement -
- Advertisement -
ಕಾಪು : ಅಡಿಕೆ ಸಾಗಿಸುತ್ತಿದ್ದ ಟೆಂಪೋದ ಟಯರ್ ಸಿಡಿದ ಕಾರಣ ಟೆಂಪೋ ಪಲ್ಟಿಯಾದ ಘಟನೆ ಕಾಪು ರಾಷ್ಟ್ರೀಯ ಹೆದ್ದಾರಿ 66ರ ಪ್ಲೈ ಓವರ್ ನಲ್ಲಿ ನಡೆದಿದೆ.
ಈ ಅಪಘಾತದಿಂದ ಟೆಂಪೋದಲ್ಲಿದ್ದ ಚಾಲಕ ಹಾಗೂ ನಿರ್ವಾಹಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಸಿದ್ದಾಪುರದಿಂದ ಮಂಗಳೂರಿಗೆ ಅಡಿಕೆ ಸಾಗಾಟ ಮಾಡುತ್ತಿದ್ದ ಟೆಂಪೋವಿನ ಟಯರ್ ಮಾರ್ಗ ಮಧ್ಯೆ ಒಡೆಯಿತೆನ್ನಲಾಗಿದೆ. ಇದರ ಪರಿಣಾಮವ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಫ್ಲೈ ಒವರ್ ನಲ್ಲಿ ಪಲ್ಟಿಯಾಗಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದು, ಇದರಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
- Advertisement -