Sunday, September 27, 2026
spot_imgspot_img
spot_imgspot_img

ಕುದ್ರೋಳಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ..!

- Advertisement -
- Advertisement -
vtv vitla
vtv vitla

ಮಂಗಳೂರು: ನಗರದ ಕುದ್ರೋಳಿಯಲ್ಲಿ ಪತಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಮಹಿಳೆ ಸೂಫಿಯಾ ಬೇಗಂ ಎನ್ನಲಾಗಿದೆ.

vtv vitla
vtv vitla

ಕಳೆದ 5 ತಿಂಗಳಿನಿಂದ ಸೂಫಿಯಾ ಬೇಗಂ ತನ್ನ ಪತಿಯೊಂದಿಗೆ ಕುದ್ರೋಳಿಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪತಿ ಪೈಂಟಿಂಗ್ ವೃತ್ತಿ ಮಾಡುತ್ತಿದ್ದರೆ ಪತ್ನಿ ಮನೆಯಲ್ಲೇ ಇರುತ್ತಿದ್ದರು.

ಗುರುವಾರ ರಾತ್ರಿ ಸೂಫಿಯಾ ಬೇಗಂ ಮತ್ತು ಅವರ ಪತಿ ಊಟ ಮಾಡಿ ಮಲಗಿದ್ದರು. ಮರುದಿನ ಮುಂಜಾನೆ 4 ಗಂಟೆಗೆ ಎದ್ದು ದಂಪತಿಗಳು ಅಡುಗೆ ಕೆಲಸ ಮಾಡಿ ಮತ್ತೆ ಮಲಗಿದ್ದಾರೆ. ಆದರೆ, ಪತಿಗೆ ಬೆಳಿಗ್ಗೆ 7.45 ಕ್ಕೆ ಎಚ್ಚರವಾದಾಗ ಪತ್ನಿ ಅದೇ ಕೊಣೆಯ ಕಿಟಕಿಯ ಸರಳಿಗೆ ಚೂಡಿದಾರದ ಶಾಲನ್ನು ಕುತ್ತಿಗೆಗೆ ಕಟ್ಟಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತಪಟ್ಟಿದ್ದರು.ಈ ಬಗ್ಗೆ ಪತಿ ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!