Monday, August 10, 2026
spot_imgspot_img
spot_imgspot_img

ಆಂಧ್ರಪ್ರದೇಶದಲ್ಲಿರುವ ತಿರುಪತಿ ಇನ್ನು ಶ್ರೀಬಾಲಾಜಿ ಜಿಲ್ಲೆ

- Advertisement -
- Advertisement -
vtv vitla
vtv vitla

ಆಂದ್ರಪ್ರದೇಶ: ಇಲ್ಲಿನ ತಿರುಪತಿಯು ಇನ್ನು ಜಿಲ್ಲಾ ಕೇಂದ್ರವಾಗಲಿದ್ದು ಅದಕ್ಕೆ ಶ್ರೀ ಬಾಲಾಜಿ ಜಿಲ್ಲೆ ಎಂದು ಹೆಸರಿಡಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸರ್ಕಾರದ ಈ ನಿರ್ಧಾರಕ್ಕೆ ಜನರಲ್ಲಿ ಖುಷಿ ಮನೆ ಮಾಡಿದ್ದರೂ ಬಾಲಾಜಿ ಜಿಲ್ಲೆ ಎಂದು ನಾಮಕರಣ ಮಾಡುವುದಕ್ಕೆ ಅತೃಪ್ತಿ ಸೂಚಿಸಿದ್ದಾರೆ. ಶ್ರೀ ಬಾಲಾಜಿ ಎನ್ನುವ ಹೆಸರು ವಿಶೇಷವಾಗಿ ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿರುವ ಹೆಸರಾಗಿದೆ ಎನ್ನುವುದು ಅವರ ವಾದವಾಗಿದೆ. ‘ಸರಳವಾಗಿ ತಿರುಪತಿ ಎಂದು ಹೆಸರಿಸಿದರೆ ಉತ್ತಮ. ಇಲ್ಲದಿದ್ದರೆ ಶ್ರೀ ವೆಂಕಟೇಶ್ವರ ಅಥವಾ ಶ್ರೀ ಶ್ರೀನಿವಾಸ ಎಂದು ನಾಮಕರಣ ಮಾಡಿ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

suvarna gold
- Advertisement -

Related news

error: Content is protected !!