Sunday, September 27, 2026
spot_imgspot_img
spot_imgspot_img

ಉಪ್ಪಿನಂಗಡಿ: ಓವರ್‌ಟೇಕ್ ಮಾಡಿ ಬರುತ್ತಿದ್ದ ವಾಹನ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಲೋಡ್ ತುಂಬಿದ್ದ ಲಾರಿ ಪಲ್ಟಿ..!

- Advertisement -
- Advertisement -
vtv vitla
vtv vitla

ಉಪ್ಪಿನಂಗಡಿ: ಮುಂದಿನಿಂದ ಓವರ್‌ಟೇಕ್ ಮಾಡಿ ಬರುತ್ತಿದ್ದ ವಾಹನ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಲಾರಿಯೊಂದು ರಸ್ತೆಯಲ್ಲಿ ಪಲ್ಟಿಯಾದ ಘಟನೆ ಕರ್ವೇಲ್ ಅಲಂಗೂರು ಎಂಬಲ್ಲಿ ನಡೆದಿದೆ.

ಛತ್ತೀಸ್‌ ಘರ್ ನಿಂದ ಉಪ್ಪಿನಂಗಡಿಯ ಬೀಡಿ ಫ್ಯಾಕ್ಟರಿಯೊಂದಕ್ಕೆ ಬೀಡಿ ಎಲೆಗಳನ್ನು ಸಾಗಿಸುತ್ತಿದ್ದ ವೇಳೆ ಎದುರಿನಿಂದ ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಿ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿ ರಸ್ತೆ ಅಂಚಿಗೆ ಇಳಿಸಿದ್ದಾರೆ.

vtv vitla
vtv vitla

ರಸ್ತೆ ಅಂಚು ಆಳವಾಗಿರುವುದರಿಂದ ಭಾರೀ ಲೋಡ್ ಇದ್ದುದರಿಂದ ಲಾರಿ ಮಗುಚಿ ಬಿದ್ದಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯವಾಗದೇ ಲಾರಿ ಚಾಲಕ ಹಾಗೂ ಕ್ಲೀನರ್ ಪಾರಾಗಿದ್ದಾರೆ.

- Advertisement -

Related news

error: Content is protected !!