Sunday, June 21, 2026
spot_imgspot_img
spot_imgspot_img

ಸುರೇಶ್ ಪಡಾರ್ ಎ.ಎಸ್.ಐ.ಆಗಿ ಭಡ್ತಿ – ಬಂಟ್ವಾಳ ಸಂಚಾರಿ ಠಾಣೆಗೆ ವರ್ಗಾವಣೆ

- Advertisement -
- Advertisement -

ವಿಟ್ಲ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಪಡಾರುರವರು ಇದೀಗ ಎ.ಎಸ್.ಐ. ಆಗಿ ಭಡ್ತಿಗೊಂಡು ಬಂಟ್ವಾಳ ಸಂಚಾರಿ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಸುರೇಶ್ ಪಡಾರ್ ರವರು  2000ದಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು  ಸುಬ್ರಹ್ಮಣ್ಯ, ಪುತ್ತೂರು ನಗರ, ಪುತ್ತೂರು ಗ್ರಾಮಾಂತರ ಠಾಣೆಗಳಲ್ಲಿ ಕಾನ್ಸ್ ಟೇಬಲ್ ಆಗಿ ಕರ್ತವ್ಯನಿರ್ವಹಿಸಿ ಬಳಿಕ ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿಗೊಂಡು ಬಂಟ್ವಾಳ ನಗರ ಠಾಣೆಗೆ ವರ್ಗಾವಣೆಗೊಂಡಿದ್ದರು.  

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಅವರು ಇದೀಗ ಎ ಎಸ್.ಐ. ಆಗಿ  ಭಡ್ತಿಹೊಂದಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆ ಗೆ ವರ್ಗಾವಣೆ ಗೊಂಡಿದ್ದಾರೆ. ಸುರೇಶ್ ಪಡಾರು ರವರು ವಿಟ್ಲಪಡ್ನೂರು ಗ್ರಾಮದ ಪಡಾರು ನಿವಾಸಿಯಾಗಿದ್ದು, ಪತ್ನಿ ಪುಷ್ಪಾವತಿ ಮಕ್ಕಳಾದ ಯಶಿಕಾ ಹಾಗೂ ಮಾನ್ಯ ರೊಂದಿಗೆ ವಾಸವಾಗಿದ್ದಾರೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!