Sunday, November 8, 2026
spot_imgspot_img
spot_imgspot_img

ಅಂಗಡಿಗಳನ್ನು ದೋಚಿ ಮೋಜು ಮಸ್ತಿ ಮಾಡುತ್ತಿದ್ದ ಲೇಡ್ ಗ್ಯಾಂಗ್ ಅಂದರ್..!

- Advertisement -
- Advertisement -

ಲಾಂಗ್ ಡ್ರೈವ್ ನೆಪದಲ್ಲಿ ಅಂಗಡಿಗಳನ್ನು ದೋಚಿ ಮೋಜು ಮಸ್ತಿ ಮಾಡುತ್ತಿದ್ದ ಲೇಡ್ ಗ್ಯಾಂಗ್ ಅನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಶೋಕಿಗಾಗಿ ಕಳ್ಳತನಕ್ಕಿಳಿದಿದ್ದ ತೆಲಂಗಾಣ ಪ್ರಕಾಶಂ ಜಿಲ್ಲೆಯ ಸುಮಲತಾ (24), ಅಂಕಮ್ಮ (30), ರಮ್ಯಾ(19) ಮತ್ತು ಇಸ್ಮಾಯಿಲ್ (19) ಬಂಧಿತ ಆರೋಪಿಗಳು.

ಶೋಕಿಗಾಗಿ ಕಳ್ಳತನಕ್ಕಿಳಿದಿದ್ದ ಲೇಡ್ ಗ್ಯಾಂಗ್ ಲಾಂಗ್ ಡ್ರೈವ್ ಹೊರಟು ಸಿಕ್ಕಿ ಸಿಕ್ಕ ಅಂಗಡಿಗಳಲ್ಲಿ ದೋಚುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 7ರ ಅಮಾನಿಕೆರೆ ಬಳಿ ಲಾಂಗ್ ಡ್ರೈವ್ ಗೆ ಬಂದಿದ್ದ ಗ್ಯಾಂಗ್ ಕೈ ಚಳಕ ತೋರಿಸಲು ಮುಂದಾದಾಗ ದೇವನಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹೈದರಾಬಾದ್ ನಿಂದ ಬೆಂಗಳೂರು ಕಡೆ ಲಾಂಗ್ ಡ್ರೈವ್ ಬಂದಿದ್ದ ಈ ಲೇಡಿ ಗ್ಯಾಂಗ್ ಕಳ್ಳತನ ನಡೆಸುತ್ತಿತ್ತು.

ಬೆಳಗ್ಗಿನ ಜಾವ ಹೆದ್ದಾರಿಯಲ್ಲಿ ಅಂಗಡಿಯಲ್ಲಿ ಕನ್ನ ಹಾಕುವ ವೇಳೆ ಸಿಕ್ಕಿಬಿದ್ದ ಕಳ್ಳಿಯರಿಂದ ವ್ಯಾಗ್ನಾರ್ ಕಾರು, ಕಳ್ಳತನಕ್ಕೆ ‌ಬಳಸುತ್ತಿದ್ದ ರಾಡ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

vtv vitla
vtv vitla
- Advertisement -

Related news

error: Content is protected !!