Friday, June 12, 2026
spot_imgspot_img
spot_imgspot_img

ಪಾಕಿಸ್ತಾನದಲ್ಲಿ ಸ್ಫೋಟ; ಹಿರಿಯ ಪೊಲೀಸ್ ಅಧಿಕಾರಿ ಸಹಿತ ಮೂವರು ಸಾವು

- Advertisement -
- Advertisement -

ಇಸ್ಲಾಮಾಬಾದ್: ಪಾಕಿಸ್ತಾನದ ಖ್ವೆಟಾದಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಸಹಿತ ಮೂವರು ಮೃತಪಟ್ಟಿದ್ದಾರೆ.

ಖ್ವೆಟ್ಟಾದ ಫಾತಿಮಾ ಜಿನ್ನಾ ರಸ್ತೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಡಿವೈಎಸ್ ಪಿ ದರ್ಜೆಯ ಅಧಿಕಾರಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಸ್ಫೋಟದ ಕಾರಣ ತಿಳಿದು ಬಂದಿಲ್ಲ. ಯಾವುದೇ ಸಂಘಟನೆ ಇದರ ಹೊಣೆ ಹೊತ್ತುಕೊಂಡಿಲ್ಲ. ಇದೀಗ ಭದ್ರತಾಪಡೆ ಇಡೀ ಪ್ರದೇಶವನ್ನು ಸುತ್ತು ವರಿದಿದೆ.

ಖ್ವೆಟ್ಟಾದಲ್ಲಿ ಪಾಕಿಸ್ತಾನ ಅಣು ಸ್ಥಾವರ ಕೂಡ ಹೊಂದಿದೆ.

- Advertisement -

Related news

error: Content is protected !!