Monday, June 30, 2025
spot_imgspot_img
spot_imgspot_img

ಯುವತಿಯನ್ನು ಮರಕ್ಕೆ ಕಟ್ಟಿಹಾಕಿ ಪ್ರಿಯಕರನ ಎದುರೇ ಸಾಮೂಹಿಕ ಅತ್ಯಾಚಾರ; ಬೀಚ್ ಗೆ ಬಂದ ಜೋಡಿಯ ಮೇಲೆ ವಿಕೃತಿ ಮೆರೆದ ಗ್ಯಾಂಗ್

- Advertisement -
- Advertisement -
vtv vitla
vtv vitla

ಬೀಚ್ ಗೆ ಬಂದಿದ್ದ ಪ್ರೇಮಿಗಳ ಮೇಲೆ ಮುಗಿಬಿದ್ದ ದುಷ್ಕರ್ಮಿಗಳು ಮರಕ್ಕೆ ಕಟ್ಟಿ ಹಾಕಿ ಪ್ರಿಯಕರನ ಎದುರೇ ಪ್ರೇಮಿಯ ಸಾಮೂಹಿಕ ಅತ್ಯಾಚಾರ ನಡೆಸಿದ ವಿಕೃತ ಘಟನೆ ಆಂಧ್ರಪ್ರದೇಶದ ಪಲ್ಲಿಂಪಾಲೆ ಬೀಚ್ ನಲ್ಲಿ ನಡೆದಿದೆ‌.

ಬೀಚ್ ಗೆ ತೆರಳಿದ್ದ ಪ್ರೇಮಿಗಳನ್ನು ನೋಡಿದ ನಶೆಯಲ್ಲಿದ್ದ ಯುವಕರ ಗ್ಯಾಂಗ್ ವಿಕೃತವಾಗಿ ವರ್ತಿಸಿದ್ದಾರೆ‌. ಮೊದಲು ಯುವಕನನ್ನು ಮರಕ್ಕೆ ಕಟ್ಟಿ ಹಾಕಿ‌ದ್ದಾರೆ. ನಂತರ ಆತನ ಕಣ್ಣೆದುರೇ ಯುವತಿಯನ್ನು ಕಟ್ಟಿಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಈ ಬಗ್ಗೆ ಸಂತ್ರಸ್ತ ಯುವತಿಯ ಸಹೋದರ ಪೊಲೀಸ್ ಕೇಸ್ ನ್ನು ದಾಖಲಿಸಿದ್ದಾನೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Related news

error: Content is protected !!