- Advertisement -
- Advertisement -


ಗುಟ್ಕಾ ತಿನ್ನುವಾಗ ವೀಳ್ಯದೆಲೆ ಗಂಟಲಿಗೆ ಸಿಲುಕಿ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಮಹಾರಾಷ್ಟ್ರದ ಔರಂಗಾಬಾದ್ ರೈಲ್ವೆ ನಿಲ್ದಾಣದ ನಿವಾಸಿ ಗಣೇಶ್ ಜಗನ್ನಾಥದಾಸ್ ವಾಘ್ (37) ಮೃತಪಟ್ಟ ದುರ್ದೈವಿ.
ಗಣೇಶ್ ಜಗನ್ನಾಥಸಾದ್ ಕಳೆದ 20 ವರ್ಷಗಳಿಂದ ರಾಹುಲ್ ಸಾಹುಜಿ ಬಳಿ ಕೆಲಸ ಮಾಡುತ್ತಿದ್ದರು. ಡಿಶ್ ಟಿವಿ ಅಳವಡಿಸಲು ಸಾಹುಜಿ ಮನೆಗೆ ಹೋಗುವ ಮುನ್ನ ಗುಟ್ಕಾ ತಿಂದಿದ್ದರು. ಕೆಲಸ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಸಾಹುಜಿಯ ಕುಟುಂಬಸ್ಥರು ಇತರರ ಸಹಾಯದಿಂದ ಗಣೇಶ್ನನ್ನು ಘಾಟಿ ಆಸ್ಪತ್ರೆಗೆ ಸಾಗಿಸಿದರು.

ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಹಠಾತ್ ಸಾವು ಹಿನ್ನೆಲೆ ಉಸ್ಮಾನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗುಟ್ಕಾ ತಿನ್ನುವಾಗ ಕೆಮ್ಮು ಬಂದಿದ್ದು, ಗಂಟಲಲ್ಲಿ ವೀಳ್ಯದೆಲೆ ಸಿಕ್ಕಿಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.


- Advertisement -








