

ವೀರಕಂಭ ಗ್ರಾಮ ಪಂಚಾಯತು ಸ್ವಚ್ಚತೆ ಸುಸ್ಥಿರ ಅಭಿವೃದ್ಧಿಯಲ್ಲಿ ರಾಜ್ಯದ ಗಮನ ಸೆಳೆಯುವಂತಾಗಬೇಕು ಎಂದು ಮಂಗಲಪದವು ಅಂಗನವಾಡಿ ಕೇಂದ್ರದಲ್ಲಿ ನಡೆದ ಲಿಂಗಸಮಾನತೆ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ತಿಳಿಸಿದರು.
ಗ್ರಾಮ ಪಂಚಾಯತ್ ವೀರಕಂಭ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜನಶಿಕ್ಷಣ ಟ್ರಸ್ಟ್ ,ಸುಗ್ರಾಮ ಸಂಘ ಸ್ನೇಹ ಸಂಜೀವಿನಿ ಒಕ್ಕೂಟ, ಜಾಗ್ರತಿ ವೇದಿಕೆ & ಬಾಲವಿಕಾಸ ಸಮಿತಿ ಮಂಗಲಪದವು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸ್ನೇಹಿ ಗ್ರಾಮ ಪಂಚಯತ್ ಅಭಿಯಾನ ಲಿಂಗಸಮಾನತೆ ಸುಸ್ಥಿರ – ಅಭಿವೃದ್ಧಿ ಸಂವಾದ ಸಂಕಲ್ಪ ಮಂಗಲಪದವು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ನಿರ್ಮಲ ವೇಗಸ್ ವಹಿಸಿದ್ದರು ಅಭಿವೃದ್ಧಿ ಅಧಿಕಾರಿಯಾದ ನಿಶಾಂತ್ ಗಿಡಕ್ಕೆ ನೀರು ಹಾಕುವುದರ ಮೂಲಕ ಮಹಿಳಾ ಸ್ನೇಹಿ ಗ್ರಾ.ಪಂಚಾಯತ್ ಅಭಿಯಾನಕ್ಕೆ ಚಾಲನೆ ನೀಡಿದರು.



ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಮಾತನಾಡಿ ಸಂವಾದ ಸಂಕಲ್ಪ ಕಾರ್ಯಕ್ರಮ ಅಲ್ಲಿಯ ಸಮುದಾಯದಿಂದಲೇ ರೂಪುರೇಷೆ ಸಿದ್ಧವಾದರೆ ಕಾರ್ಯಕ್ರಮದ ಆಶಯ ಈಡೇರಿಕೆಗೆ ದಾರಿ ಎಂದರು ಮತ್ತು ಅದೇ ರೀತಿಯಾಗಿ ಸಿದ್ಧವಾದ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು. ವಿಟ್ಲ ವಲಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಉಷಾ ಮಹಿಳಾಸ್ನೇಹಿ ಗ್ರಾಮಪಂಚಾಯತ್ ಅಭಿಯಾನದ ಬಗ್ಗೆ ಹಾಗೂ ದೌರ್ಜನ್ಯ ಮುಕ್ತ ಗ್ರಾಮ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಸ್ವಚ್ಛತಾ ರಾಯಭಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನರೇಗಾ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಮಹಿಳೆಯರೊಂದಿಗೆ ಲಿಂಗಸಮಾನತೆ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳಾದ ತರಕಾರಿ ಉಪ್ಪಿನಕಾಯಿ ಕರಿದ ತಿಂಡಿಗಳು ಪೆನಾಯಿಲ್ ಚಟ್ನಿ ಇತರ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ನಡೆಯಿತು ಹಾಗೂ ಸ್ತ್ರೀಶಕ್ತಿ ಮಹಿಳೆಯರು ತಾವು ತಯಾರಿಸಿದ ಪೌಷ್ಠಿಕ ಆಹಾರದ ಪ್ರದರ್ಶನ ನಡೆಸಿದರು.ಸ್ತ್ರೀಶಕ್ತಿ ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮ ಆಟೋಟ ಸ್ಪರ್ಧೆಗಳನ್ನು ನಡೆಸಿಕೊಟ್ಟರು.

ಆರೋಗ್ಯ ಇಲಾಖೆಯಿಂದ ಭಾಗವಹಿಸಿದ ಸಮುದಾಯ ಆರೋಗ್ಯ ಅಧಿಕಾರಿ ನಿತಿನ್ ಅಸಾಂಕ್ರಾಮಿಕ ರೋಗಗಳು ಸಾಂಕ್ರಾಮಿಕ ರೋಗಗಳು ಹಾಗೂ ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.ಆರೋಗ್ಯ ಇಲಾಖೆಯ ಮೂಲಕ ಮಹಿಳೆಯರ ರಕ್ತದೊತ್ತಡ ಸಕ್ಕರೆ ಕಾಯಿಲೆ ತಪಾಸಣೆ ಶಿಬಿರ ನಡೆಯಿತು.
ಶಿಬಿರವನ್ನು ಆರೋಗ್ಯ ಇಲಾಖೆಯ ಸೌಮ್ಯ ಶೋಭಾ ಲಿಂಗಪ್ಪ ಜ್ಯೋತಿ ಹಾಗೂ ಆಶಾ ಕಾರ್ಯಕರ್ತೆಯರಾದ ಶಶಿಕಲಾ ಕೋಮಲಾಕ್ಷಿ ಸ್ನೇಹಲತಾ ನಡೆಸಿಕೊಟ್ಟರು. ಜನಶಿಕ್ಷಣ ಟ್ರಸ್ಟ್ ಸಂಯೋಜಕ ಚೇತನ್ ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿ ಸಾಂತ್ವನ ಕೇಂದ್ರದ ಸೇವೆಗಳು,ಮಹಿಳೆಯರ ಮೇಲಿನ ದೌರ್ಜನ್ಯಗಳು ಹಾಗೂ ತಡೆಗಟ್ಟಲಿರುವ ಕಾನೂನುಗಳ ಬಗ್ಗೆ ತಿಳಿಸಿದರು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್ ಮಾತನಾಡಿ ಗ್ರಾಮದ ಸ್ವಚ್ಛತೆಯನ್ನು ಆದ್ಯತೆಯಲ್ಲಿ ಗಮನದಲ್ಲಿಟ್ಟುಕೊಂಡು ನಿರ್ವಹಿಸುವ ಜವಾಬ್ದಾರಿ ಪ್ರತಿ ಮನೆಯಿಂದ ಆಗಬೇಕು ಹಾಗೂ ಸಮುದಾಯ ಪಾಲುದಾರರಾಗಬೇಕೆಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರಘು ಪೂಜಾರಿ, ಲಲಿತಾ ಭಾಗವಹಿಸಿದ್ದರು.
ಅಂಗನವಾಡಿ ಮೇಲ್ವಿಚಾರಕರಾದ ರೇಣುಕಾ ಕಾರ್ಯಕ್ರಮ ನಿರೂಪಿಸಿದರು, ಮಂಗಲಪದವು ಅಂಗನವಾಡಿ ಕಾರ್ಯಕರ್ತೆ ಶ್ರುತಿ ನಿರ್ವಹಿಸಿದರು.ಚೇತನ್ ವಂದಿಸಿದರು. ಸ್ನೇಹ ಸಂಜೀವಿನಿ ಒಕ್ಕೂಟದ ಸವಿತಾ, ಜಯಂತಿ & ಅಂಗನವಾಡಿ ಕಾರ್ಯಕರ್ತೆಯರು ಸಹಕರಿಸಿದರು.











