![G L Acharya G L Acharya](https://vtvvitla.com/wp-content/uploads/2023/07/gl_acharya.jpeg)
![panikkar panikkar](https://vtvvitla.com/wp-content/uploads/2020/07/panikkar.jpeg)
![](https://vtvvitla.com/wp-content/uploads/2022/02/school-janapriya-757x1024.jpg)
![](https://vtvvitla.com/wp-content/uploads/2021/12/WhatsApp-Image-2021-12-15-at-10.11.35-AM-1024x796.jpeg)
ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಚಲಿಸುತ್ತಿದ್ದ ಬಸ್ಸಿನಲ್ಲೇ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
![](https://vtvvitla.com/wp-content/uploads/2022/03/rdjkuholp.jpg)
ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ವಿಡಿಯೋ ಅನ್ನು ವಿದ್ಯಾರ್ಥಿಯೊಬ್ಬ ರೆಕಾರ್ಡ್ ಮಾಡಿದ್ದಾನೆ ಎನ್ನಲಾಗಿದೆ. ಈ ವಿಡಿಯೋ ದಲ್ಲಿ ಹುಡುಗಿಯರು ಮತ್ತು ಹುಡುಗರ ಗುಂಪು ಬಿಯರ್ ಬಾಟಲಿಯನ್ನು ತೆರೆದು ಸೇವಿಸುವುದನ್ನು ತೋರಿಸುತ್ತದೆ.
![](https://vtvvitla.com/wp-content/uploads/2022/03/girls-drinking-beer.jpg)
ತಮಿಳುನಾಡಿನ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿ -ವಿದ್ಯಾರ್ಥಿನಿಯರು ತಿರುಕಝಕುಂದ್ರಂನಿಂದ ಥಾಚೂರಿಗೆ ತೆರಳುತ್ತಿದ್ದ ಬಸ್ಸನ್ನು ಹತ್ತಿದ ವಿದ್ಯಾರ್ಥಿನಿಯರು ಬ್ಯಾಗಿನಿಂದ ಬಿಯರ್ ಬಾಟೆಲ್ ಒಂದನ್ನು ತೆಗೆದು ಕುಡಿಯಲಾರಂಭಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಚೆಂಗಲ್ಪಟ್ಟುವಿನ ಸರ್ಕಾರಿ ಶಾಲೆಯವರು ಎಂದು ನಂಬಲಾಗಿದೆ.ಆರಂಭದಲ್ಲಿ ಇದು ಹಳೆಯ ವಿಡಿಯೋ ಎಂದು ಭಾವಿಸಲಾಗಿತ್ತು, ನಂತರ ಮಂಗಳವಾರದಂದು ಈ ಘಟನೆ ನಡೆದಿರುವುದು ಪತ್ತೆಯಾಗಿದೆ.
![](https://vtvvitla.com/wp-content/uploads/2022/03/beeeerrrr.jpg)
ಘಟನೆಯನ್ನು ದೃಢಪಡಿಸಿದ ಚೆಂಗಲ್ಪಟ್ಟು ಜಿಲ್ಲಾ ಶಿಕ್ಷಣಾಧಿಕಾರಿ ರೋಸ್ ನಿರ್ಮಲಾ, “ಇದು ಶಾಲೆಯ ಹೊರಗೆ ನಡೆದಿರುವುದರಿಂದ, ಪೊಲೀಸರು ಅದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಅದು ಮುಗಿದ ನಂತರ, ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ “ಎಂದಿದ್ದಾರೆ.
![](https://vtvvitla.com/wp-content/uploads/2022/01/web-ad-1024x299.jpg)
![](https://vtvvitla.com/wp-content/uploads/2021/10/Lakshmi-Ganesh-2-1024x683.jpg)
![](https://vtvvitla.com/wp-content/uploads/2022/01/WhatsApp-Image-2022-01-17-at-3.04.40-PM-1024x628.jpeg)