Monday, June 30, 2025
spot_imgspot_img
spot_imgspot_img

ಪುತ್ತೂರು: ಕಾರುಗಳು ಮುಖಾಮುಖಿ ಡಿಕ್ಕಿ; ನಾಲ್ವರಿಗೆ ಗಾಯ

- Advertisement -
- Advertisement -
vtv vitla
vtv vitla

ಪುತ್ತೂರು: ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಕೆಮ್ಮಾಯಿಯಲ್ಲಿ ನಡೆದಿದೆ. ಪುತ್ತೂರು ಕಡೆಯಿಂದ ಉಪ್ಪಿ ನಂಗಡಿ ಕಡೆ ಹೋಗುತ್ತಿದ್ದ i20 ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ನಂತರ ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಅಮರನಾಥ್ ಗೌಡ ಅವರ i20 ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದಿಂದಾಗಿ ಎರಡು ಕಾರುಗಳು ಹಾನಿಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!