Wednesday, June 24, 2026
spot_imgspot_img
spot_imgspot_img

ಟ್ರಾಫಿಕ್‌ ಜಾಮ್‌ ಕ್ಲೀಯರ್ ಮಾಡುತ್ತಿದ್ದ ವೇಳೆ ಡಿಕ್ಕಿ ಹೊಡೆದ ವಾಹನ; ಪೊಲೀಸ್ ಸಿಬ್ಬಂದಿ ಸಹಿತ ಮೂವರು ಸಾವು

- Advertisement -
- Advertisement -

ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾ‌ಮ ಪೊಲೀಸ್ ಕಾನ್ಸ್ ಸ್ಟೇಬಲ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ ಬುಡನಾಳ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಕಲಘಟಗಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಪಂಡಿತ ಕಾಸರ್ (28), ಗಂಗೀವಾಳ ಗ್ರಾಮದ ಶಿವಲಿಂಗಪ್ಪ ಕಲಬುರ್ಗಿ ಹಾಗೂ ಹನುಮಂತಪ್ಪ ಕಲಬುರ್ಗಿ ಮೃತರು.

ಹುಬ್ಬಳ್ಳಿ ತಾಲೂಕಿನ ಬುಡನಾಳ ಕ್ರಾಸ್ ಬಳಿ ನಿನ್ನೆ ಸಾಯಂಕಾಲ ಮಳೆ, ಬಿರುಗಾಳಿಯಿಂದ ರಸ್ತೆಯಲ್ಲಿ ಮರಗಳು‌ ಬಿದ್ದಿದ್ದವು. ಇದರಿಂದ ಹುಬ್ಬಳ್ಳಿ-ಕಾರವಾರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾನ್ಸ್ ಸ್ಟೇಬಲ್ ಸ್ಥಳದಲ್ಲಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!