Monday, June 15, 2026
spot_imgspot_img
spot_imgspot_img

ವಿಟ್ಲ: “ಸಿದ್ಧಿವಿನಾಯಕ ಯುವಕ ಮಂಡಲ” ನೂತನ ಯುವಕ ಮಂಡಲದ ಆರಂಭೋತ್ಸವ

- Advertisement -
- Advertisement -

ಕಂಬಳಬೆಟ್ಟು : ಸಿದ್ಧಿವಿನಾಯಕ ಯುವಕ ಮಂಡಲ ಎಂಬ ನೂತನ ಯುವಕ ಮಂಡಲದ ಆರಂಭೋತ್ಸವ ಮತ್ತು ಸೇವಾನಿಧಿ ಅಭಿಯಾನದ ಉದ್ಘಾಟನಾ ಸಮಾರಂಭವು ದಿನಾಂಕ 10-04-2022ನೇ ಅದಿತ್ಯವಾರ ಧರ್ಮನಗರದಲ್ಲಿ ನಡೆಯಲಿದೆ.

ಶ್ರೀ ರಾಮನವಮಿಯ ಶುಭ ದಿನದಂದು ಇಡ್ಕಿದು, ಕುಳ, ವಿಟ್ಲಮುಡ್ನೂರು ಈ ಮೂರು ಗ್ರಾಮಗಳ ಕೇಂದ್ರಬಿಂದು ಧರ್ಮನಗರದಲ್ಲಿ ‘ಸಿದ್ಧಿವಿನಾಯಕ ಯುವಕ ಮಂಡಲ’ ಎಂಬ ನಾಮಧೇಯದೊಂದಿಗೆ ಯುವಕ ಮಂಡಲ ಕಾರ್‍ಯಾರಂಭಗೊಳ್ಳಲಿದೆ.

ಯುವ ಸಮೂಹವನ್ನು ಒಗ್ಗೂಡಿಸುವ ಮೂಲಕ ಸಾಮಾಜಿಕ ಸೇವಾಕಾರ್ಯದ ಜತೆ ಜತೆಗೆ ಶ್ರೀಸಾಮಾನ್ಯರ ಕಷ್ಟಗಳಿಗೆ ಸ್ಪಂದನೆ ನೀಡುವ ಮೂಲಕ ಅವರ ಮನೋಬಲವನ್ನು ಸುದೃಢಗೊಳಿಸಲು ಕೈಗೊಂಡ ಕಿರು ಪ್ರಯತ್ನ, ನಾಳೆಯ ಸುಂದರ ಸುದೃಢ ಗ್ರಾಮ ನಿರ್ಮಾಣಕ್ಕಾಗಿ, ನಮ್ಮಿಂದಾದ ಪ್ರಾಮಾಣಿಕ ಸೇವಾಮನೋಭಾವವನ್ನು ನಮ್ಮವರೊಡನೆ ಹಂಚಿಕೊಳ್ಳೋಣ ಎಂದು ಸಿದ್ಧಿವಿನಾಯಕ ಯುವಕ ಮಂಡಲದ ಅಧ್ಯಕ್ಷರು ಮತ್ತು ಸರ್ವಸದಸ್ಯರು ತಿಳಿಸಿದ್ದಾರೆ.

- Advertisement -

Related news

error: Content is protected !!