Tuesday, July 21, 2026
spot_imgspot_img
spot_imgspot_img

ಮೇ 2ಕ್ಕೆ “ಧರೆಯಾಳೋ ಸ್ವಾಮಿ ನೀನೇ ” ಭಕ್ತಿಗೀತೆ ಬಿಡುಗಡೆ

- Advertisement -
- Advertisement -

ಶ್ರೀ ಉಮಾಮಹೇಶ್ವರ ದೇವಸ್ಥಾನ. ಮಾಮೇಶ್ವರ ಪ್ರತಿಷ್ಠಾ ದಿನ ಹಾಗೂ ದೇವರ ಭಕ್ತಿಗೀತೆ ವೀಡಿಯೋ ಬಿಡುಗಡೆ ಸಮಾರಂಭ. ವಿಟ್ಲ ಅರಮನೆಯ ಕ್ರಷ್ಣಯ್ಯ ಕೆ ಇವರ ಶುಭ ಆಶೀರ್ವಾದಗಳೊಂದಿಗೆ ಶ್ರೀ ಉಮಾಮಹೇಶ್ವರ ದೇವರ ಭಕ್ತಿಗೀತೆ ವೀಡಿಯೋ ಬಿಡುಗಡೆ ಸಮಾರಂಭ ಮೇ 2 ಕ್ಕೆ ಜರುಗಲಿದೆ. ಮೇ 2 ಸೋಮವಾರ ಶ್ರೀ ಉಮಾಮಹೇಶ್ವರ ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶತರುದ್ರಾಭಿಷೇಕವು ಇದೆ.

“Shutter up films ” ಅರ್ಪಿಸುವ “ಧರೆಯಾಳೋ ಸ್ವಾಮಿ ನೀನೇ ” ಭಕ್ತಿಗೀತೆಗೆ ಕಾರ್ತಿಕ್ ಆಚಾರ್ಯ ಕೈಂತಿಲ ಸಾಹಿತ್ಯ ಬರೆದಿದ್ದಾರೆ. ಮಾನಸ ಆಚಾರ್ಯ ಕಲ್ಲಡ್ಕ ಇವರ ಮಧುರವಾದ ಧ್ವನಿಯಲ್ಲಿ ಮೂಡಿಬಂದ ಈ ಭಕ್ತಿಗೀತೆ ಗೆ ಭರತನಾಟ್ಯ ವಿಧುಷಿ ಕಾವ್ಯ ಶ್ರೀ ಅಡ್ಡಾಳಿ ಇವರು ಹೆಜ್ಜೆ ಹಾಕಿದ್ದಾರೆ ಹಾಗೂ ಹಲವಾರು ವೇದಿಕೆಗಳಲ್ಲಿ ಅಭಿನಯಿಸಿದ ಬಾಲಪ್ರತಿಭೆಗಳಾದ ಮೋನಿಷ್‌ ಮತ್ತು ಪ್ರಾಪ್ತಿ ಮಾಮೆಶ್ವರ ಪಾತ್ರವನ್ನು ನಿರ್ವಹಿಸಿದ್ದಾರೆ.


ಪ್ರಸಾದ್ ಆಚಾರ್ಯ ಕೈಂತಿಲ ಛಾಯಾಗ್ರಹಣದಲ್ಲಿ ಮೂಡಿಬಂದ ಈ ಭಕ್ತಿಗೀತೆ ವೀಡಿಯೋ ” shutter up films ” youtube channel ನಲ್ಲಿ ಮೇ 2 ರಂದು ಶ್ರೀ ಉಮಾಮಹೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ಬಿಡುಗಡೆಗೊಳ್ಳಲಿದೆ.

- Advertisement -

Related news

error: Content is protected !!