Tuesday, June 23, 2026
spot_imgspot_img
spot_imgspot_img

ಬೈಂದೂರು: ಪ್ರಥಮ ಪಿಯುಸಿ ಫಲಿತಾಂಶಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ

- Advertisement -
- Advertisement -

ಬೈಂದೂರು: ಬೈಂದೂರಿನ ತಗ್ಗರ್ಸೆ ಎಂಬಲ್ಲಿ ಪ್ರಥಮ ಪಿಯುಸಿ ಫಲಿತಾಂಶದಿಂದ ಹೆದರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ತಗ್ಗರ್ಸೆ ಗ್ರಾಮದ ಶೋಭಾ ಶೇರುಗಾರರ ಬಾಡಿಗೆ ಮನೆ ನಿವಾಸಿ ಬೇಬಿ ಶೆಡ್ತಿ ಎಂಬವರ ಮಗ ಸುದೀಪ್(17) ಎಂದು ಗುರುತಿಸಲಾಗಿದೆ.

vtv vitla
vtv vitla

ಸುದೀಪ್ ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದು, ಎ.30ರ ಪ್ರಥಮ ಪಿಯುಸಿಯ ಫಲಿತಾಂಶದಲ್ಲಿ ತಾನು ಪಾಸ್ ಆಗುವುದಿಲ್ಲ ಎಂಬ ಹೆದರಿಕೆಯಿಂದ ಮನೆಯ ಅಡುಗೆ ಕೋಣೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!