

ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡ ವತಿಯಿಂದ ನಡೆದ ಶ್ರೀ ರಾಮ ಭಜನಾಮೃತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಬೆಳಿಗ್ಗೆ ಗಂಟೆ 6.00ಕ್ಕೆ ಮಾಣಿಲ ಶ್ರೀಧಾಮ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಹಾಗೂ ವಿಟ್ಲ ಅರಮನೆಯಾ ಬಂಗಾರ ಅರಸರು ದ್ವೀಪ ಪ್ರಜ್ವಲಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಜೆ ಗಂಟೆ 4ರಿಂದ ಕುಣಿತ ಭಜನೆ ನಡೆಯಿತು. ಭಜನಾ ಮಂಗಲೋತ್ಸವ ನಡೆದ ನಂತರ ಸಂಜೆ ಗಂಟೆ 6.30ಕ್ಕೆ ಸರಿಯಾಗಿ ಧರ್ಮ ಸಭೆ ನಡೆಯಿತು.

ಸಭಾ ವೇದಿಕೆಯಲ್ಲಿ ವಿ ಎಚ್ ಪಿ ಧರ್ಮ ಪ್ರಸಾರ ಪ್ರಮುಖ್ ಶ್ರೀ ಕೃಷ್ಣ ಉಪಾಧ್ಯಾಯರು ದಿಕ್ಸೂಚಿ ಭಾಷಣ ಮಾಡಿದರು. ಶ್ರೀ ಮುರಳಿ ಕೃಷ್ಣ ಹಸಂತ್ತಡ್ಕರವರು ಸಂಘಟನೆಯ ಬಗ್ಗೆ ಮಾತನಾಡಿದರು.ವಿ ಎಚ್ ಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೃಷ್ಣ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಸತೀಶ್,ರಾಮೋತ್ಸವ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಕೃಷ್ಣಯ್ಯ ವಿಟ್ಲ ಅರಮನೆ, ವಿ ಎಚ್ ಪಿ ಪ್ರಖಂಡ ಅಧ್ಯಕ್ಷರಾದ ಶ್ರೀ ಪದ್ಮನಾಭ ಕಟ್ಟೆ,ಸಂಘಟನಾ ಚತುರ ಹಾಗೂ ಯುವ ಹೋರಾಟಗಾರ ಬಜರಂಗದಳ ಪ್ರಖಂಡ ಸಂಚಾಲಕರಾದ ಶ್ರೀ ಚಂದ್ರಹಾಸ್ ಕನ್ಯಾನ ಉಪಸ್ಥಿತರಿದ್ದರು. ಸಭಾ ಅಧ್ಯಕ್ಷತೆಯನ್ನು ನಿವೃತ್ತ ಸೈನಿಕರಾದ ವಿಠಲ ಶೆಟ್ಟಿ ಅಗರಿ ಬಾಳಿಕೆ ವಹಿಸಿದರು.
ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣವನ್ನು ರಾಮೋತ್ಸವ ಸಮಿತಿಯಾ ಅಧ್ಯಕ್ಷರಾದ ಚರಣ್ ಕಾಪುಮಜಲು ಮಾಡಿದರು.ಹೆಸರಾಂತ ಗಾಯಕ ಕಿಶೋರ್ ಪೆರ್ಲ ವೈಯಕ್ತಿಕ ಗೀತೆ ಹಾಡಿದರು.ರಾಮೋತ್ಸವ ಸಮಿತಿ ಕಾರ್ಯದರ್ಶಿ ಮನೋಜ್ ಕಾಶಿಮಠರವರು ವಂದಿಸಿದರು. ಕಾರ್ಯಕ್ರಮದ ಕೊನೆಗೆ ರಾವಣ ದಹನ ನಡೆಯಿತು.
ಪುಟಾಣಿ ಮಕ್ಕಳು ಶ್ರೀ ರಾಮ, ಲಕ್ಷ್ಮಣ, ಸೀತೆ, ಹನುಮಂತನ ವೇಷ ಧರಿಸಿ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದರು. ಬಂಟ್ವಾಳದ ಜನಪ್ರಿಯ ಶಾಸಕರಾದ ರಾಜೇಶ್ ನಾಯ್ಕ್ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿದರು. ವಿಶ್ವ ಹಿಂದೂ ಪರಿಷತ್ ಬಜರಂಗದಳ ಪ್ರಖಂಡ ಹಾಗೂ ಘಟಕದ ಪ್ರಮುಖರು ಮತ್ತು ಕಾರ್ಯಕರ್ತರು, ಭಾಜಪದ ಮಂಡಲ ಹಾಗೂ ಮಹಾಶಕ್ತಿ ಕೇಂದ್ರದ ಪ್ರಮುಖರು,ಹಿಂದೂ ಜಾಗರಣ ವೇದಿಕೆಯಾ ಪ್ರಮುಖರು ಹಾಗೂ ಸಂಘ ಪರಿವಾರದ ಎಲ್ಲಾ ಪ್ರಮುಖರಿದ್ದರು.
ಬೆಳಿಗ್ಗೆಯಿಂದಲೇ ಕಾರ್ಯಕ್ರಮ ಕೊನೆ ತನಕ ನೂರಾರು ಹಿಂದೂ ಬಾಂಧವರು ಕಾರ್ಯಕ್ರಮದತ್ತ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.










