Friday, June 27, 2025
spot_imgspot_img
spot_imgspot_img

ಬಿ.ಸಿ. ರೋಡ್: ನಾವು ಹೇಳುವ ಆಪ್‌ ಡೌನ್‌ಲೋಡ್‌ ಮಾಡಿ ರಿಚಾರ್ಜ್‌ ಮಾಡಿ ಎಂದ ಖದೀಮ..! ತಮಗೇ ಅರಿವೇ ಇಲ್ಲದಂತೆ ಲಕ್ಷಾಂತರ ಕಳೆದುಕೊಂಡ ಡಾಕ್ಟರ್..!

- Advertisement -
- Advertisement -

ಯಾವುದೋ ಒಂದು ಆಪ್‌ನಲ್ಲಿ ರಿಚಾರ್ಜ್‌ ಮಾಡಲು ಹೇಳಿ ಸೂಕ್ತ ದಾಖಲೆಗಳನ್ನು ನೀಡಿದ ವ್ಯಕ್ತಿಯೋರ್ವರು ಮೋಸದ ಸುಳಿಗೆ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಬಿಸಿ ರೋಡ್‌ನಲ್ಲಿ ನಡೆದಿದೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಾ| ಬಿ ಆಶ್ವಿನ್ ಬಾಳಿಗಾ (44) ಎಂಬವರಿಗೆ ಏಪ್ರಿಲ್ ೨೯ ರ ಸಂಜೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಕರೆ ಮಾಡಿ ಜಿಯೋ ನಂಬರ್ನ್ನು ಅಪ್ಡೇಟ್ ಮಾಡುವುದಾಗಿ ತಿಳಿಸಿ ಗೂಗಲ್ ಪ್ಲೇ ಸ್ಟೋರ್ನಿಂದ QUICK EASY APP ನ್ನು ಡೌನ್ಲೋಡ್ ಮಾಡುವಂತೆ ಹೇಳಿದ್ದಾರೆ.

ನಂತರ ಮೊಬೈಲ್ ನಲ್ಲಿ MY JIO APP ನಲ್ಲಿ 10 ರೂಪಾಯಿ ರಿಚಾರ್ಜ್ ಮಾಡಲು ತಿಳಿಸಿದಂತೆ ಪಿರ್ಯಾದಿದಾರರು ಹೆಚ್ಡಿಎಫ್ಸಿ ಬ್ಯಾಂಕ್ ಎಸ್ಬಿ ಖಾತೆ ನಂಬರ್‍ ಮತ್ತು ಡೆಬಿಟ್ ಕಾರ್ಡ್ ವಿವರಗಳನ್ನು MY JIO APPನಲ್ಲಿ ಹಾಕಿ 10 ರೂ ರಿಚಾರ್ಜ್ ಮಾಡಿದ್ದಾರೆ. ಇದಾದ ಬಳಿಕ ಖತರ್ನಾಕ್ ತಂಡ ಆ ಆಪ್ ಬಳಿಸಿಕೊಂಡು ಗೊತ್ತಿಲ್ಲದಂತೆಯೆ ಖಾತೆಯಿಂದ, ರೂ.10,000/-ದಂತೆ 3 ಬಾರಿ ಮತ್ತು ರೂ 45,000/- 3 ಬಾರಿ ಅಪರಿಚಿತನ ಖಾತೆಗೆ ಒಟ್ಟು ರೂ 1,65,000/- ಹಣ ವರ್ಗಾವಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!