Saturday, August 29, 2026
spot_imgspot_img
spot_imgspot_img

ಮಳಲಿ ಮಸೀದಿ ಜಾಗವನ್ನು ಮುಸ್ಲಿಂ ಮುಖಂಡರು ಸೌಹಾರ್ದಯುತವಾಗಿ ಹಿಂದೂಗಳಿಗೆ ಒಪ್ಪಿಸಬೇಕು; ಪ್ರಮೋದ್ ಮುತಾಲಿಕ್

- Advertisement -
- Advertisement -

ಕೊಪ್ಪಳ: ಮಳಲಿ ಮಸೀದಿ ನವೀಕರಣ ವೇಳೆ ದೇವಸ್ಥಾನ ಪತ್ತೆಯಾಗಿರುವುದನ್ನು ಶಾಸ್ರೋಕ್ತವಾಗಿ ಪತ್ತೆ ಮಾಡಿರುವುದು ಸ್ವಾಗತಾರ್ಹ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಅದು ದೇವಸ್ಥಾನ ಅಂತಾ ಈ ಹಿಂದೆಯೇ ಗೊತ್ತಿತ್ತು, ಇದೀಗ ಅಧಿಕೃತವಾಗಿ ಮತ್ತು ಶಾಸ್ರೋಕ್ತವಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಆ ಮಸೀದಿ ಜಾಗದಲ್ಲಿ ವೀರಶೈವ-ಲಿಂಗಾಯತ ಮಠ ಇತ್ತು ಎಂಬುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿಕೆ ನೀಡಿರುವ ಮುತಾಲಿಕ್, ಮುಸ್ಲಿಂ ಮುಖಂಡರು ಸೌಹಾರ್ದಯುತವಾಗಿ ಹಿಂದೂಗಳಿಗೆ ಒಪ್ಪಿಸಬೇಕು. ವಿನಾಕಾರಣ ಗಲಭೆ, ಸಂಘರ್ಷಕ್ಕೆ ಕಾರಣ ಆಗಬಾರದು ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಇನ್ನು ಮಳಲಿಯಲ್ಲಿ ಹಿಂದೂಗಳಿಗೆ ಒಪ್ಪಿಸಿದ್ರೆ ಸೌಹಾರ್ದತೆ ಉಳಿಯುತ್ತದೆ, ಇಲ್ಲವಾದರೆ ಮತ್ತರ ದ್ವೇಷ, ಸಂಘರ್ಷ, ಕೋರ್ಟ್ ಅಂತಾ ಶುರುವಾಗುತ್ತದೆ, ಇದೆಲ್ಲಾ ಆಗಬಾರದು ಎಂದು ಕೂಡಾ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

- Advertisement -

Related news

error: Content is protected !!