

ಪುತ್ತೂರು: ಶಿವಮಣಿ ಕಲಾ ಸಂಘ ರಿ. ಶಿವನಗರ ಇದರ 2021 22 ನೇ ಸಾಲಿನ ವಾರ್ಷಿಕ ಮಹಾಸಭೆಯು ರಕ್ತೇಶ್ವರಿ ಅಂಗನವಾಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯ ಅತ್ಯುತ್ತಮ ಅಂಕಗಳಿಗಾಗಿ ಶ್ರೀಮನ್ ಹಾಗೂ ಸ್ವಾತಿ ಇವರನ್ನು ಸನ್ಮಾನಿಸಲಾಯಿತು.

ವಾರ್ಷಿಕ ಮಹಾಸಭೆಯಲ್ಲಿ ನೂತನ ಶಿವಮಣಿ ಸಾಂಸ್ಕೃತಿಕ ಸಮಿತಿ ರಚನೆಗೊಳಿಸಲಾಯಿತು. ನೂತನ ಅಧ್ಯಕ್ಷರಾಗಿ ಸಂತೋಷ್ ಮುರ, ಉಪಾಧ್ಯಕ್ಷರಾಗಿ ವಿನೋದ್ ಗಾಣಿಗ, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಸವನೂರು, ಉಪ ಕಾರ್ಯದರ್ಶಿಯಾಗಿ ರತ್ನ ಕೆ ನಾಯರ್, ಗೌರವಾಧ್ಯಕ್ಷರಾಗಿ ಕಲಾವಿದ ಕೃಷ್ಣಪ್ಪ ಕಲ್ಲೇಗ, ಗೌರವ ಸಲಹೆಗಾರರಾಗಿ ರವೀನ ಅಂಜಲಿ, ಇವರನ್ನು ಎಲ್ಲರ ಸಮ್ಮುಖದಲ್ಲಿ ಆಯ್ಕೆಗೊಳಿಸಲಾಯಿತು.

ಕಲಾ ಸಂಘದ ಅಧ್ಯಕ್ಷರು ದೀಪಕ್ ಉಪ್ಪಿನಂಗಡಿ ಹಾಗೂ ಇವರು ಹಾಗೂ ನಗರಸಭಾ ಸದಸ್ಯರಾದ ಶಿವರಾಮ ಸಪಲ್ಯ ಸಭೆಯನ್ನುದ್ದೇಶಿಸಿ ಉತ್ತಮ ಮಾತುಗಳನ್ನು ಆಡಿದರು.
ತಂಡದ ಅಭಿವೃದ್ಧಿಯ ಬಗ್ಗೆ ಚರ್ಚೆ ಗೊಳಿಸಲಾಯಿತು. ಸುದರ್ಶನ್ ಪುತ್ತೂರು ಇವರು ಕಾರ್ಯಕ್ರಮ ನಿರೂಪಣೆಗೊಳಿಸಿದರು. ಅನ್ನಪೂರ್ಣ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಮನು ಕುಮಾರ್ ಸ್ವಾಗತ ಹಾಗೂ ಧನ್ಯವಾದ ಸಮರ್ಪಿಸಿದರು.










