Saturday, April 20, 2024
spot_imgspot_img
spot_imgspot_img

ವಿಟ್ಲ: “ರಾಜ್ಯಮಟ್ಟದ ಜಯಕರ್ನಾಟಕ ಜನಪರ ವೇದಿಕೆ ಗಾಯನ ರತ್ನ ಸ್ಪರ್ಧೆ- 2021” ಬಹುಮಾನ ವಿತರಣೆ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಜಯಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ನೇತೃತ್ವದಲ್ಲಿ, ವಿಟಿವಿ ಸಹಭಾಗಿತ್ವದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಸಲಾದ “ರಾಜ್ಯಮಟ್ಟದ ಜಯಕರ್ನಾಟಕ ಜನಪರ ವೇದಿಕೆ ಗಾಯನ ರತ್ನ ಸ್ಪರ್ಧೆ”ಯ ಬಹುಮಾನ ವಿತರಣೆ ಕಾರ್ಯಕ್ರಮವು ವಿಟ್ಲದ ವಿಠ್ಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮoದಿರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಮಹಾ ಪ್ರಧಾನ ಸಂಚಾಲಕ ಶೆ ಬೋ ರಾಧಾಕೃಷ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಠಲ ವಿದ್ಯಾ ಸಂಘದ ಸಂಚಾಲಕ ಎಲ್ ಎನ್ ಕೂಡೂರು, ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ವಿಟ್ಲ ಪಟ್ಟಣ ಪಂಚಾಯತ್‌ನ ಸದಸ್ಯ ರವಿಪ್ರಕಾಶ್ ವಿಟ್ಲ ಉಪಸ್ಥಿತರಿದ್ದರು.


ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕ ರಾಮ್‌ದಾಸ್ ವಿಟ್ಲ, ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಘಟನೆ ಕಾರ್ಯದರ್ಶಿ ರವಿಕುಮಾರ್, ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಪ್ರವೀಣ್ ಶೆಟ್ಟಿ ತಿಂಗಳಾಡಿ ಹಾಗೂ ಕಾವ್ಯ ಶೆಟ್ಟಿ, ಬೆಂಗಳೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ನೀಲಕಂಠೇ ಗೌಡ, ದ.ಕ ಜಿಲ್ಲಾ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಕೋಶಾಧಿಕಾರಿ ಜ್ಯೋತಿ ಪ್ರಕಾಶ್ ಪುಣಚ ಘನ ಉಪಸ್ಥಿತಿ ವಹಿಸಿದ್ದರು.

ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಸಲಾದ “ರಾಜ್ಯಮಟ್ಟದ ಜಯಕರ್ನಾಟಕ ಜನಪರ ವೇದಿಕೆ ಗಾಯನ ರತ್ನ ಸ್ಪರ್ಧೆ”ಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಅಕ ರಾಮ್‌ದಾಸ್ ವಿಟ್ಲ ಸ್ವಾಗತಿಸಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿ ವಂದಿಸಿದ್ರು. ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಅಶ್ವಿನಿ ಪೆರುವಾಯಿ ಹಾಗೂ ವಿಟಿವಿ ಸಿಬ್ಬಂಧಿ ದಿನೇಶ್ ಸಿ.ಹೆಚ್ ಕಾರ್ಯಕ್ರಮ ನಿರೂಪಿಸಿದ್ರು.

ಕಾರ್ಯಕ್ರಮದ ನಂತರ ಪ್ರಸಿದ್ಧ ಕರಾಟೆ ಪಟು ಕಾರ್ತಿಕ್ ಎಸ್ ಕಟೀಲ್ ಹಾಗೂ ಶೋಭಲತಾ ಇವರಿಂದ ಮಹಿಳೆಯರ ಮತ್ತು ಮಕ್ಕಳ ಸುರಕ್ಷತಾ ಪ್ರಾತ್ಯಕ್ಷಿತೆ ಕಾರ್ಯಗಾರ ನಡೆಯಿತು.


ಕಾರ್ಯಕ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ರಾಜಶೇಖರ ಶೆಟ್ಟಿ ತಾಳಿಪಡ್ಪು, ದೇವಿಪ್ರಸಾದ್ ಶೆಟ್ಟಿ, ಪ್ರಭಾಕರ್ ಅಮೈ, ಶಿತ್ ರೈ, ಪ್ರಶಾಂತ್ ಶೆಟ್ಟಿ, ಮನೋಜ್ ಕುಮಾರ್ ಆಳ್ವ, ಸುಮಿತ್ ಕಾರ್ಯಾಡಿ, ಮೋಹಿತ್ ಶೆಟ್ಟಿ, ವಿಠಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿನಿಯರು, ಸ್ಪರ್ಧೆಯ ವಿಜೇತರು, ವಿಟಿವಿ ಸಿಬ್ಬಂಧಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement -

Related news

error: Content is protected !!