Tuesday, June 23, 2026
spot_imgspot_img
spot_imgspot_img

ಫೇಸ್ ಬುಕ್ ನಲ್ಲಿ ಚಿಗುರಿದ ಪ್ರೀತಿ; ಭಾರತದ ಪ್ರಿಯತಮನನ್ನು ನೋಡಲು ಈಜಿಕೊಂಡೇ ಬಂದ ಬಾಂಗ್ಲಾದ ಯುವತಿ…!

- Advertisement -
- Advertisement -

ಭಾರತದ ಯುವಕನೊಂದಿಗೆ ಫೇಸ್ ಬುಕ್ ನಲ್ಲಿ ಪ್ರೀತಿ ಚಿಗುರಿ ಆತನನ್ನು ಭೇಟಿಯಾಗಲು ಭಾರತಕ್ಕೆ ಈಜಿಕೊಂಡೇ ಬಂದು ಯುವತಿಯೊಬ್ಬಳು ಪೊಲೀಸರ ಅತಿಥಿಯಾಗಿದ್ದಾಳೆ.

ಭಾರತದ ಕೃಷ್ಣ ಮಂಡಲ್ ಎಂಬಾತನಿಗೆ ಫೇಸ್‌ಬುಕ್‌ನಲ್ಲಿ ಅಭಿಕ್ ಮಂಡಲ್ ಎಂಬಾತನ ಪರಿಚಯವಾಗಿದೆ. ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಅವರ ಬಳಿ ಪಾಸ್‌ಪೋರ್ಟ್ ಇಲ್ಲದ ಕಾರಣ ಅಕ್ರಮವಾಗಿ ಗಡಿ ದಾಟಲು ನಿರ್ಧರಿಸಿದ್ದಾಳೆ. ಪೊಲೀಸ್ ಮೂಲಗಳ ಪ್ರಕಾರ, ಯುವತಿ ಮೊದಲು ರಾಯಲ್ ಬೆಂಗಾಲ್ ಟೈಗರ್ಸ್‌ಗೆ ಹೆಸರುವಾಸಿಯಾದ ಸುಂದರಬನ್ಸ್ ಪ್ರವೇಶಿಸಿ, ನಂತರ ನದಿಯಲ್ಲಿ ಸುಮಾರು ಒಂದು ಗಂಟೆ ಈಜಿದ್ದಾಳೆ ಎನ್ನಲಾಗುತ್ತಿದೆ.

ಇದಾದ ಮೂರು ದಿನಗಳ ನಂತರ ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಕೃಷ್ಣ ಅಭಿಕ್ ಅವರ ವಿವಾಹ ನಡೆದಿದೆ. ಆದರೆ, ಅಕ್ರಮವಾಗಿ ದೇಶ ಪ್ರವೇಶಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿದೆ.

- Advertisement -

Related news

error: Content is protected !!