- Advertisement -
- Advertisement -


ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತುವನ್ನು ಸೇವಿಸಿ ನಶೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಸಜೀಪ ಜಂಕ್ಷನ್ ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ಪೊಲೀಸರು ರೌಂಡ್ಸ್ ನಲ್ಲಿರುವಾಗ ಮಾದಕ ವಸ್ತುವನ್ನು ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಗಮನಿಸಿ ವಿಚಾರಿಸಿದಾಗ ಆತ ಮಾದಕ ವಸ್ತು ಸೇವನೆ ಮಾಡಿರುವುದು ತಿಳಿದು ಬಂದಿದೆ. ಆರೋಪಿಯನ್ನು ಸಜೀಪನಡು ಮೊಹಮ್ಮದ್ ಜಾಫರ್ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯಾಧಿಕಾರಿ ದೃಡಪತ್ರ ನೀಡಿದ್ದಾರೆ. ನಂತರ ಮೊಹಮ್ಮದ್ ಜಾಫರ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗಿದೆ.
- ಪಾರ್ಟ್ಟೈಮ್ ಕೆಲಸದ ಆಮಿಷ: ಹಣ ಪಡೆದು ವಂಚನೆ; ಪ್ರಕರಣ ದಾಖಲು
- ಒಂದೇ ಕ್ಷಣದಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬ; ಕೆರೆಗೆ ಬಿದ್ದು ಅವಳಿ ಮಕ್ಕಳ ಸಾವು
- ದಾಖಲೆ ಇಲ್ಲದೇ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್: ಎಂಆರ್ಪಿಎಲ್ ಉದ್ಯೋಗಿ ಸೇರಿ ಇಬ್ಬರ ವಿರುದ್ಧ ಎಫ್ಐಆರ್, ಇಬ್ಬರು ಕಾನ್ಸ್ಟೇಬಲ್ ಅಮಾನತು
- ಸಂಚರಿಸುತ್ತಿದ್ದ ಲಾರಿ ಬೆಂಕಿಗಾಹುತಿ-ಡೀಸೆಲ್ ಸೋರಿಕೆಯಿಂದ ಅನಾಹುತ-ಶಿರಾಡಿ ಘಾಟ್ ನಲ್ಲಿ ನಡೆದ ಘಟನೆ
- ಮಂಗಳೂರಿನಲ್ಲಿ ನಡೆಯುವ ಕ್ಯಾಬೆನೆಟ್ ಸಭೆಗೆ ಮುನ್ನ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಸಿದ್ಧಪಡಿಸಿ: ಮುಖ್ಯಮಂತ್ರಿ ಡಿಕೆಶಿ ಸೂಚನೆ


- Advertisement -








