Saturday, August 29, 2026
spot_imgspot_img
spot_imgspot_img

ಐಸಿಸ್‌ಗೆ ಯುವತಿಯರ ಮಾರಾಟ; ಕಾಸರಗೋಡಿನಿಂದ ರವಾನೆ..! ಆಮೀಷಕ್ಕೆ ಒಳಗಾಗಿ ಭವಿಷ್ಯ ಹಾಳಾದೀತು..!

- Advertisement -
- Advertisement -

ಆಮೀಷಕ್ಕೆ ಒಳಗಾಗಿ ಯುವತಿಯರು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಲವ್‌ ಜಿಹಾದ್‌ಗೆ ಒಳಗಾಗಿ ಎಲ್ಲೋ ಹೋಗಿ ಏನಾದರೂ ಎಂಬುವುದೇ ಗೊತ್ತಾಗುತ್ತಿಲ್ಲ. ಲವ್‌ ಜಿಹಾದ್‌ಗೆ ಬಲಿಯಾಗಿ ಐಸಿಸ್‌ಗೆ ಸೇರುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಯೂ ಇದೆ. ಇದಕ್ಕೆ ನಿದರ್ಶನ ಎಂಬಂತೆ ಮಂಗಳೂರಿನಲ್ಲಿ ಮಾಜಿ ಶಾಸಕ ಇದಿನಬ್ಬ ಮನೆಗೆ ಎನ್‌ಐಎ ದಾಳಿ ನಡೆಸಿತ್ತು. ಈ ವೇಳೆ ದೀಪ್ತಿ ಮಾರ್ಲ ಅಲಿಯಾಸ್‌ ಮರಿಯಮ್ಮಳಿಗೆ ಉಗ್ರರ ನಂಟಿರುವುದು ಸ್ಪಷ್ಟವಾಗಿದೆ. ಅಂತೆಯೇ ಉದ್ಯೋಗದ ನೆಪ ತೋರಿಸಿ ಯುವತಿಯರನ್ನು ಐಸಿಸ್‌ಗೆ ಮಾರಾಟ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದೆ.

ವಿದೇಶದಲ್ಲಿ ಮನೆ ಕೆಲಸದ ಆಮೀಷ ತೋರಿಸಿ ಕಾಸರಗೋಡು ಜಿಲ್ಲೆಯ ಯುವತಿಯರನ್ನು ಕರೆದೊಯ್ದು, ಬಳಿಕ ಅವರನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್​ಗೆ ಹಸ್ತಾಂತರಿಸುತ್ತಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ)ಕ್ಕೆ ಮಾಹಿತಿ ಲಭಿಸಿದೆ. ಈ ಬಗ್ಗೆ ಎನ್.ಐ.ಎ ತನಿಖೆ ಆರಂಭಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಐಸಿಸ್ ಜೊತೆ ನೇರ ಲಿಂಕ್ ಆರೋಪ ಸಾಬೀತು; ಉಳ್ಳಾಲದ ಮಾಜಿ ಶಾಸಕ ಇದಿನಬ್ಬ ಮೊಮ್ಮಗನ ಪತ್ನಿ ದೀಪ್ತಿ ಮಾರ್ಲಾ ಅಲಿಯಾಸ್ ಮರಿಯಂ‌ ಸೇರಿದಂತೆ ಎಂಟು ಮಂದಿ ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ ಶೀಟ್…!!

ಗಲ್ಪ್ ರಾಷ್ಟ್ರ ಕೇಂದ್ರೀಕರಿಸಿ ಯುವತಿಯರನ್ನು ಮನೆಕೆಲಸಗಳಿಗೆ ರವಾನಿಸಲು ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಎನ್​ಐಎಗೆ ಮಾಹಿತಿ ಲಭಿಸಿದೆ. ಈತನ ಪತ್ತೆಗೆ ರಾಷ್ಟ್ರೀಯ ತನಿಖಾ ದಳ ಬಲೆ ಬೀಸಿದೆ. ಎರ್ನಾಕುಳಂನ ನೇಮಕಾತಿ ಸಂಸ್ಥೆಯೊಂದು ಮಾವೇಲಿಕ್ಕರ ನಿವಾಸಿ ಯುವತಿಯನ್ನು ಕುವೈತ್​ಗೆ ಕಳುಹಿಸಿದ್ದು, ಅಲ್ಲಿಂದ ಆಕೆಯನ್ನು ಸಿರಿಯಾಕ್ಕೆ ರವಾನಿಸಿದೆ. ತಂಡದ ವಶದಲ್ಲಿದ್ದ ಈ ಯುವತಿ ತಪ್ಪಿಸಿಕೊಂಡು ಊರಿಗೆ ಬಂದಿದ್ದು, ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾಳೆ.

ದೇಶದಲ್ಲಿ ಮನೆಕೆಲಸಕ್ಕೆ ಯುವತಿಯರು ಬೇಕಾಗಿದ್ದು, 50 ಸಾವಿರ ರೂ.ವರೆಗೆ ವೇತನ ನೀಡುವುದಾಗಿ ಜಾಹೀರಾತು ನೀಡುತ್ತಾರೆ. ಗಲ್ಪ್ ರಾಷ್ಟ್ರಕ್ಕೆ ಯುವತಿಯರು ತಲುಪುತ್ತಿದ್ದಂತೆ ಅವರನ್ನು 10 ಲಕ್ಷ ರೂ.ಗೂ ಹೆಚ್ಚಿನ ಮೊತ್ತಕ್ಕೆ ಸಿರಿಯಾದ ಐಸಿಸ್ ಕೇಂದ್ರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಯುವತಿ ತಿಳಿಸಿದ್ದಾಳೆ. ಯುವತಿ ನೀಡಿದ ಮಾಹಿತಿ ಅನ್ವಯ ದೂರು ದಾಖಲಾಗಿದ್ದರೂ ಪ್ರಕರಣವನ್ನು ಎನ್​ಐಎಗೆ ವಹಿಸದಿರುವುದರಿಂದ ತನಿಖೆ ವಿಳಂಬವಾಗುತ್ತಿದೆ. ಈ ಕೃತ್ಯದಲ್ಲಿ ತಳಿಪರಂಬ ನಿವಾಸಿ ಮಜೀದ್ ಎಂಬಾತನ ಕೈವಾಡವಿರುವ ಬಗ್ಗೆ ಗುಮಾನಿ ವ್ಯಕ್ತವಾಗಿದ್ದು, ಆತನ ಪತ್ತೆಗೆ ತನಿಖಾ ಏಜೆನ್ಸಿ ಕ್ರಮ ಕೈಗೊಂಡಿದೆ.

- Advertisement -

Related news

error: Content is protected !!