Thursday, July 30, 2026
spot_imgspot_img
spot_imgspot_img

ವಿಟ್ಲ: ಕಾಲೇಜಿಗೆಂದು ತೆರಳಿದ ವಿದ್ಯಾರ್ಥಿನಿ ನಾಪತ್ತೆ..!

- Advertisement -
- Advertisement -

ವಿಟ್ಲ: ಕಾಲೇಜಿಗೆಂದು ತೆರಳಿದ ವಿದ್ಯಾರ್ಥಿನಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಸೆರ್ಕಳದಲ್ಲಿ ನಡೆದಿದೆ. ಸಗಿ ಕಾಲೇಜಿನ ವಿದ್ಯಾರ್ಥಿನಿ ಕು.ಅಕ್ಷತಾ(20) ನಾಪತ್ತೆಯಾದ ವಿದ್ಯಾರ್ಥಿನಿ.

ಅಕ್ಷತಾ ಕೊಳ್ನಾಡು ಗ್ರಾಮದ ಸೆರ್ಕಳ ಎಂಬಲ್ಲಿ ತನ್ನ ಚಿಕ್ಕಮ್ಮನ ಜೊತೆ ವಾಸವಿದ್ದು, ಆಕೆ ಜೂ.17 ರಂದು ಎಂದಿನಂತೆ ಬೆಳಗ್ಗೆ ಮನೆಯಿಂದ ಕಾಲೇಜಿಗೆ ತೆರಳಿದ್ದು, ಸಂಜೆ 5 ಗಂಟೆಯಾದರೂ ಮನೆಗೆ ಬಾರದೆ ಇದ್ದು, ಮನೆಯವರು ಆಕೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನೆರೆಮನೆ, ಸಂಬಂಧಿಕರಲ್ಲಿ ವಿಚಾರಿಸಿದಾಗ ಅಲ್ಲಿಯೂ ಆಕೆ ಇರದಿರುವುದು ಖಚಿತವಾದಾಗ ಗಾಬರಿಗೊಂಡ ಅಕ್ಷತಾಳ ಚಿಕಮ್ಮ ಅಕ್ಷತಾಳ ಪತ್ತೆಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ಷತಾಳ ಚಿಕಮ್ಮ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಣೆಯಾದ ಅಕ್ಷತಾಳ ದೈಹಿಕ ಚಹರೆ ಹೀಗಿದೆ:

ಸಾಧಾರಣ ಶರೀರ, ಎಣ್ಣೆ ಕಪ್ಪು ಮೈ ಬಣ್ಣ, ಕೋಲು ಮುಖ, 5.3ಅಡಿ ಎತ್ತರ, ಪಿಂಕ್ ಬಣ್ಣದ ಚೂಡಿದಾರ್, ಬಿಳಿ ಬಣ್ಣದ ವೇಲ್ ಧರಿಸಿರುತ್ತಾಳೆ. ಕನ್ನಡ ತುಳು ಭಾಷೆ ಮಾತನಾಡುತ್ತಾಳೆ.

ಮೇಲ್ಕಂಡ ಚಹರೆ ಇರುವ ಯುವತಿ ಪತ್ತೆಯಾದಲ್ಲಿ ವಿಟ್ಲ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ -239233 ಅಥವಾ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ- 0824-2220508 ಅಥವಾ ಪೊಲೀಸ್ ಠಾಣೆಯ ಇ-ಮೇಲ್ ಐಡಿ Vittalaq@ksprovin ಇಲ್ಲಿಗೆ ತಿಳಿಸಲು ಕೋರಲಾಗಿದೆ.

- Advertisement -

Related news

error: Content is protected !!