Thursday, March 28, 2024
spot_imgspot_img
spot_imgspot_img

ವಿಟ್ಲ: ಬೀಳುವ ಹಂತದಲ್ಲಿ ರಸ್ತೆಯ ಬದಿಯ ಮರ; ಆತಂಕದಲ್ಲಿ ಜನತೆ – ವಿದ್ಯುತ್ ಕಡಿತವೂ ಸಾಧ್ಯತೆ

- Advertisement -G L Acharya panikkar
- Advertisement -

ವಿಟ್ಲ : ಕನ್ಯಾನ ಒಡಿಯೂರು ರಸ್ತೆಯ ಬದಿಯ ಪಕ್ಕದಲ್ಲಿ ಮರ ಬೀಳುವ ಹಂತದಲ್ಲಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ವಿದ್ಯುತ್ ಕಂಬದ ಪಕ್ಕದಲ್ಲೇ ಮರ ಇದ್ದು ಇಂದು ನಾಳೆ ಬೀಳುವ ಹಂತ ತಲುಪಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ರಸ್ತೆಯ ಸಮೀಪವಿರುವ ಮರ ಅಪಾಯವನ್ನು ಆಹ್ವಾನಿಸುತ್ತಿದ್ದು, ಇನ್ನೇನೂ ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮರ ರಸ್ತೆಗೆ ಬೀಳುವ ಸಂಭವವಿರುವುದರಿಂದಾಗಿ ವಾಹನ ಸವಾರರು ಭಯ ಭೀತಿಯಿಂದಲೇ ಸಂಚಾರಿಸುವ ಪರಿಸ್ಥಿತಿ ಎದುರಾಗಿದೆ.

ಸಣ್ಣ ಗಾಳಿ ಬಂದರೂ ಮರ ವಿದ್ಯುತ್ ತಂತಿ ಮೇಲೆ ಬೀಳುವ ಸ್ಥಿತಿಯಲ್ಲಿದೆ. ಅಪಾಯ ಸಂಭವಿಸುವ ಮೊದಲು ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ.

- Advertisement -

Related news

error: Content is protected !!