Thursday, September 3, 2026
spot_imgspot_img
spot_imgspot_img

ಕೊಲೆ ಬೆದರಿಕೆಯೊಡ್ಡಿ ಕೊಟ್ಟಿಗೆಯಲ್ಲಿದ್ದ ಕಟ್ಟಿದ್ದ ದನ ಕಳ್ಳತನ

- Advertisement -
- Advertisement -

ಹೆಬ್ರಿ: ಮನೆಯವರಿಗೆ ಕತ್ತಿ ತೋರಿಸಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನಗಳನ್ನು ಕಳ್ಳತನ ಮಾಡಿದ ಘಟನೆ ಉಡುಪಿಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮದ ಬಲ್ಬಾರ ಎಂಬಲ್ಲಿ ನಡೆದಿದೆ.

ಇಲ್ಲಿನ, ದಯಾಕರ್ ಹಾಗೂ ಪ್ರಸಾದ್ ಅವರು ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ಕೊಟ್ಟಿಗೆ ಹತ್ತಿರದಲ್ಲಿ ಕಾರೊಂದು ನಿಂತಿರುವುದನ್ನು ಗಮನಿಸಿ ದನದ ಕೊಟ್ಟಿಗೆ ಬಂದು ನೋಡುವಾಗ ಅಪರಿಚಿತ ವ್ಯಕ್ತಿಗಳು 2 ದನಗಳನ್ನು ಎಳೆದೊಯ್ಯುತ್ತಿದ್ದರು.

ಬಿಡಿಸಿಕೊಳ್ಳಲು ಅವರ ಸಮೀಪ ಹೋದಾಗ, ನೀವು ಮುಂದೆ ಬಂದರೆ ನಿಮಗೆ ಕತ್ತಿಯಿಂದ ಕಡಿದು ಕೊಲ್ಲುವುದಾಗಿ ಕತ್ತಿಯನ್ನು ತೋರಿಸಿ ಬೆದರಿಸಿದ್ದರು. ಸುಮಾರು 30 ಸಾವಿರ ರೂ. ಮೌಲ್ಯದ ಎರಡು ದನಗಳನ್ನು ಕದ್ದು ಪರಾರಿಯಾಗಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!